ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000 ರೂ.ನೀಡಲಾಗುತ್ತಿದೆ. ಈಗಾಗಲೇ ಹಲವರ ಖಾತೆಗೆ ಯೋಜನೆಯ 2 ಕಂತಿನ ಹಣ ಜಮಾ ಆಗಿದ್ದು, ಇದೀಗ ಸರ್ಕಾರ 3 ನೇ ಕಂತಿನ ಹಣ ಬಿಡುಗಡೆಗೆ ಸಜ್ಜಾಗಿದೆ.
ಆದರೆ ಕೆಲವರಿಗೆ ಇನ್ನೂ ಮೊದಲನೇ ಕಂತಿನ ಹಣ ಕೂಡ ಜಮಾ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಜನ ತಮ್ಮ ಖಾತೆಗೆ ಯಾವಾಗ ಹಣ ಬರುತ್ತದೆ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.ಸರ್ಕಾರ ಈಗಾಗಲೇ ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಯ ಹಣ 15 ರಿಂದ 20ನೇ ತಾರೀಖಿನ ಒಳಗೆ ಖಾತೆಗೆ ನೇರವಾಗಿ ಜಮಾ ಆಗಲಿದೆ.
ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಅಗಸ್ಟ್ 30ರಂದು ಬಿಡುಗಡೆ ಆಗಿದ್ದು, ಅಕ್ಟೋಬರ್ 15 ನೇ ತಾರೀಖಿನಿಂದ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಿತ್ತು. ಇನ್ನೂ ಮೂರನೇ ಕಂತಿನ ಹಣ ಈ ತಿಂಗಳು 15 ರ ಒಳಗೆ ಬರಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರ ಈಗಾಗಲೇ ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಯ ಹಣ 15 ರಿಂದ 20ನೇ ತಾರೀಖಿನ ಒಳಗೆ ಖಾತೆಗೆ ನೇರವಾಗಿ ಜಮಾ ಆಗಲಿದೆ.ಆದ್ದರಿಂದ 15 ರ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದು ಖಚಿತವಾಗಿದೆ.