ಬೆಂಗಳೂರು: ‘ಗೃಹಲಕ್ಷ್ಮಿ’ ಯೋಜನೆಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, 60 ಸಾವಿರಕ್ಕೂ ಅಧಿಕ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೊಬೈಲ್ ಆ್ಯಪ್ ಮೂಲಕ 15,276 ಮಹಿಳೆಯರು ಹಾಗೂ ವಿವಿಧ ಸರ್ಕಾರಿ ಕೇಂದ್ರಗಳ ಮೂಲಕ ವೆಬ್ ಅಪ್ಲಿಕೇಶನ್ಗಳಲ್ಲಿ 44,946 ಮಹಿಳೆಯರಿಂದ ನೋಂದಣಿ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಮೊದಲ ದಿನ 60,222 ಮಹಿಳೆಯರಿಂದ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಮೊಬೈಲ್ ಆ್ಯಪ್ ಮೂಲಕ 15,276 ಹಾಗೂ ವೆಬ್ ಅಪ್ಲಿಕೇಶನ್ ಮೂಲಕ 44,946 ಮಹಿಳೆಯರಿಂದ ನೋಂದಣಿ ಆಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಆಗಸ್ಟ್ 16 ರಿಂದ ಪ್ರತಿ ಕುಟುಂಬದ ಯಜಮಾನಿ ಖಾತೆಗೆ ತಿಂಗಳಿಗೆ 2,000 ರೂ. ಜಮಾ ಮಾಡಲಾಗುವುದು. ಜೂನ್ 19 ರಂದು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ನೋಂದಣಿಗೆ ಚಾಲನೆ ನೀಡಿದ್ದು, ಯೋಚನೆ ನೋಂದಣಿಯ ಮೊದಲ ದಿನವಾದ ನಿನ್ನೆ 60,000ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅಡಿ 1.28 ಕೋಟಿ ಫಲಾನುಭವಿಗಳಿಗೆ ಮಾಸಿಕ ತಲಾ ಎರಡು ಸಾವಿರ ವಾರ್ಷಿಕ ಪ್ರತಿ ಫಲಾನುಭವಿಗೆ 24,000 ರೂ.ಗಳನ್ನು ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ.