ಬಳ್ಳಾರಿ : ವಿದ್ಯುತ್ ಬಾಕಿ ಬಿಲ್ ಪಾವತಿಗೆ (ಸೆ.30) ಇಂದು ಕೊನೆಯ ದಿನವಾಗಿದೆ. ಇಂದು ವಿದ್ಯುತ್ ಬಿಲ್ ಕಟ್ಟದಿದ್ದರೆ ಗೃಹ ಜ್ಯೋತಿ ಯೋಜನೆಯ ಲಾಭ ಸಿಗೋದಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಸಂಜೆಯೊಳಗೆ ಬಾಕಿ ವಿದ್ಯುತ್ ಪಾವತಿಸುವಂತೆ ಗ್ರಾಹಕರಿಗೆ ಜೆಸ್ಕಾಂ ಸೂಚನೆ ನೀಡಿದೆ. ಪಂಚಾಯ್ತಿ ಮೂಲಕ ವಿದ್ಯುತ್ ಬಾಕಿ ಬಿಲ್ ಪಾವತಿಗೆ ಮನವಿ ಜೆಸ್ಕಾಂ ಮಾಡಿದ್ದು, . ವಿದ್ಯುತ್ ಬಿಲ್ ಬಾಕಿ ಉಳಿಸಿದ್ರೇ ಗೃಹ ಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸಿಗಲ್ಲ ಎಂಬ ಸಂದೇಶ ಸಾರುತ್ತಿದೆ.
ಅದೇ ರೀತಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಮಡಿಕೇರಿ ವಿಭಾಗ ವ್ಯಾಪ್ತಿಯ ಗೃಹ ವಿದ್ಯುತ್ ಬಳಕೆ ಗ್ರಾಹಕರಿಗೆ ಸಂಬಂಧಿಸಿದಂತೆ ಗೃಹ ಜ್ಯೋತಿ ಯೋಜನೆ ಪೂರ್ವದ ವಿದ್ಯುತ್ ಬಾಕಿ ಶುಲ್ಕ ಪಾವತಿಸಲು ಸೆಪ್ಟಂಬರ್, 30 ಕಡೆಯ ದಿನವಾಗಿದೆ ಎಂದು ಸೆಸ್ಕ್ ನ ಪ್ರಕಟಣೆ ತಿಳಿಸಿದೆ.
ಬಾಕಿ ಶುಲ್ಕ ಪಾವತಿಗೆ ಈಗಾಗಲೇ ಸೆಪ್ಟಂಬರ್, 30 ರ ಗಡುವು ನೀಡಲಾಗಿತ್ತು. ಅದರಂತೆ ಹಲವು ಗ್ರಾಹಕರು ಬಾಕಿ ಶುಲ್ಕ ಪಾವತಿಸಿದ್ದಾರೆ. ಬಾಕಿ ಪಾವತಿಸದ ಗ್ರಾಹಕರಿಗೆ ಕೊನೆಯ 4 ದಿನಗಳ ಕಾಲಾವಕಾಶವಿದೆ.ವಿದ್ಯುತ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೇ ಅಕ್ಟೋಬರ್, 01 ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯವಾಗಿರುತ್ತದೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.