ಚಿಕ್ಕಮಗಳೂರು : ಪ್ರತಿ ಮನೆಗೆ 200 ಯೂನಿಟ್ ನೀಡುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 25 ರೊಳಗೆ ನೊಂದಾಯಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಗ್ರಾಹಕರು ಜುಲೈ 25 ರೊಳಗೆ ಸೇವಾಸಿಂಧುವಿನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ದಿನಾಂಕದೊಳಗೆ ನೋಂದಾಯಿಸಲು ವಿಫಲವಾದರೆ ಅವರನ್ನು ಜುಲೈ ತಿಂಗಳ ಯೋಜನೆಯಿಂದ ಹೊರಗಿಡಲಾಗುತ್ತದೆ, ಬಳಿಕ ಅವರನ್ನು ಆಗಸ್ಟ್ ನಿಂದ ಪ್ರಾರಂಭವಾಗುವ ಯೋಜನೆಗೆ ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇಲ್ಲ, ಎಲ್ಲರೂ ಬೇಗ ಅರ್ಜಿ ಸಲ್ಲಿಸಿ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಿದ್ದರು.
ಜೂನ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದವರಿಗೆ ಜುಲೈ ತಿಂಗಳಿನಿಂದ ಉಚಿತ ವಿದ್ಯುತ್ ನೀಡಲಾಗುತ್ತದೆ. , ಜುಲೈ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ರೆ ಆಗಸ್ಟ್ ತಿಂಗಳಿನಿಂದ ಉಚಿತ ವಿದ್ಯುತ್ ನೀಡಲಾಗುತ್ತದೆ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೆ ಉಚಿತ ವಿದ್ಯುತ್ ನೀಡುವುದಿಲ್ಲ, ಬಾಕಿ ಹಣವನ್ನು ಕಟ್ಟಲೇಬೇಕು ಎಂದು ಇಂಧನ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.