ಬೆಂಗಳೂರು : ಜನರು ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆ ಲಾಭ ಪಡೆಯುತ್ತಿದ್ದು, ಇದುವರೆಗೆ 1.60 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ ಪ್ರತಿ ತಿಂಗಳು ಸರಾಸರಿ 1.10ಕೋಟಿ ಕುಟುಂಬಗಳು ಸಂಪೂರ್ಣವಾಗಿ ಉಚಿತ ವಿದ್ಯುತ್ ಪ್ರಯೋಜನ ಪಡೆಯುತ್ತಿದ್ದಾರೆ. ಇದೀಗ ಸರ್ಕಾರ 250 ಯೂನಿಟ್ ಉಚಿತ ವಿದ್ಯುತ್ ನೀಡಲು ಮುಂದಾಗಿದೆ.
ಹೌದು. ನೇಕಾರರ ವರ್ಗದ ಕುಟುಂಬಗಳಿಗೆ ಮಾತ್ರ ಈ 250 ಯೂನಿಟ್ ಉಚಿತ ವಿದ್ಯುತ್ ಸೀಮಿತವಾಗುತ್ತದೆ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳ ಸಚಿವರು ಈ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಸರ್ಕಾರ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ವ್ಯಾಪ್ತಿಯ ನೇಕಾರರ ಕುಟುಂಬಗಳಿಗೆ ಗೃಹಜ್ಯೋತಿ ಮಿತಿಯನ್ನು 250 ಕ್ಕೆ ಏರಿಸಲು ಅನುಮತಿ ನೀಡುತ್ತದೆ ಎಂದು ತಿಳಿದು ಬಂದಿದೆ. ನೇಕಾರರಿಗೆ 250 ಯೂನಿಟ್ ಉಚಿತ ವಿದ್ಯುತ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ನೇಕಾರರಿಗೆ ಸರ್ಕಾರ ದೀಪಾವಳಿ ಗಿಫ್ಟ್ ನೀಡಿದೆ.
ಇದರಿಂದ 35ರಿಂದ 40 ಸಾವಿರ ನೇಕಾರರ ಕುಟುಂಬಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ. 2129ರಿಂದ 2149 ಕೋಟಿವರೆಗೆ ಈ ಯೋಜನೆ ಅನುಷ್ಠಾನಕ್ಕೆ ವೆಚ್ಚವಾಗಲಿದೆ. ದೊಡ್ಡ ನೇಕಾರರಿಗೂ 500 ಯುನಿಟ್ ವರೆಗೆ 71.25 ನಂತೆ ರಿಯಾಯ್ತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ 1ರಿಂದ 10ರಷ್ಟು ಎಚ್ಪಿಹೊಂದಿದನೇಕಾರರು ಶೇ.80ರಷ್ಟು ಇದ್ದಾರೆ. ಶೇ.20 ರಷ್ಟು ದೊಡ್ಡ ನೇಕಾರರಿದ್ದಾರೆ. ಶೇ. 80ರಷ್ಟು ನೇಕಾರರಿಗೆ ಉಚಿತ ವಿದ್ಯುತ್ ಪ್ರಯೋಜನ ಪಡೆಯಲಿದ್ದಾರೆ ಎಂದು ಸಚಿವ ಶಿವಾನಂದ್ ಪಾಟೀಲ್ ಇತ್ತೀಚೆಗೆ ಮಾಹಿತಿ ನೀಡಿದ್ದರು.