ಜಗತ್ತಿನಾದ್ಯಂತ ಕೋವಿಡ್‌ಗೆಂದು ನೀಡಲಾಗುತ್ತಿರುವ ಲಸಿಕೆಗಳು ವ್ಯಾಪಕವಾಗಿ ಪಸರಬಲ್ಲ ಒಮಿಕ್ರಾನ್ ಅವತಾರಿ ವಿರುದ್ಧ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಥಮಿಕ ಹಂತದ ಸಂಶೋಧನೆಗಳು ಸ್ಪಷ್ಟವಾಗಿ ತಿಳಿಸುತ್ತಿವೆ.
ಎಲ್ಲಾ ಲಸಿಕೆಗಳು ಒಮಿಕ್ರಾನ್‌ನಿಂದ ಸಂಭವಿಸಬಹುದಾದ ಅನಾರೋಗ್ಯಗಳ ವಿರುದ್ಧ ಕೊಂಚ ಮಟ್ಟಿಗೆ ಪರಿಹಾರ ನೀಡಬಲ್ಲವಾಗಿವೆ ಅಷ್ಟೇ. ಆದರೆ ಫೈಜ಼ರ್ ಮತ್ತು ಮೊಡೆರ್ನಾ ಶಾಟ್‌ಗಳೊಂದಿಗೆ ಬೂಸ್ಟರ್ ನೀಡಿದಲ್ಲಿ ಸೋಂಕುಗಳನ್ನು ಆರಂಭಿಕ ಹಂತದಲ್ಲಿ ತಡೆಗಟ್ಟಲು ಸ್ವಲ್ಪ ಯಶ ಸಾಧಿಸಬಹುದು. ಈ ಲಸಿಕೆಗಳು ಜಗತ್ತಿನ ಬಹುತೇಕ ಮೂಲೆಗಳಲ್ಲಿ ಸದ್ಯದ ಮಟ್ಟಿಗೆ ಲಭ್ಯವಿಲ್ಲ.
ಬೆಂಗಳೂರಿನಿಂದ ಈ ಫ್ಲೈಟ್ ಏರುವವರಿಗೆ ಸಿಗುತ್ತೆ ಉಚಿತ ಸೀಟ್ ಆಯ್ಕೆ ಮತ್ತು ಊಟ
ಇನ್ನು, ಚೀನಾದ ಸಿನೋಫಾರ್ಮ್ ಮತ್ತು ಸಿನೋವ್ಯಾಕ್ ಸೇರಿದಂತೆ, ರಷ್ಯನ್ ನಿರ್ಮಿತ ಲಸಿಕೆಗಳು ಮತ್ತು ಅಸ್ಟ್ರಾಜ಼ೆಂಕಾ, ಜಾನ್ಸನ್ & ಜಾನ್ಸನ್‌ನ ಲಸಿಕೆಗಳು ಒಮಿಕ್ರಾನ್ ಪಸರುವಿಕೆ ತಡೆಗಟ್ಟಲು ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಂಶೋಧನೆಯ ಆರಂಭಿಕ ಫಲಿತಾಂಶಗಳು ತೋರುತ್ತಿವೆ. ಬಹುತೇಕ ದೇಶಗಳು ತಮ್ಮ ಜನಸಂಖ್ಯೆಗಳಿಗೆ ಇದೇ ಲಸಿಕೆಗಳಿಂದ ಲಸಿಕಾಕರಣಕ್ಕೆ ಮುಂದಾಗಿರುವ ಕಾರಣ, ಒಮಿಕ್ರಾನ್ ತಂದಿಟ್ಟ ವ್ಯತ್ಯಾಸದಿಂದ ಭಾರೀ ಪರಿಣಾಮ ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತದಲ್ಲಿ ಬಳಸಲಾಗುತ್ತಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಲ್ಲೂ ಸಹ ಒಮಿಕ್ರಾನ್‌ಗೆ ಉತ್ತರವಿಲ್ಲದಾಗಿದೆ. ಭಾರತದಲ್ಲಿ ಲಸಿಕೆ ಪಡೆದ ಮಂದಿಯ ಪೈಕಿ 90%ನಷ್ಟು ಜನರು ಕೋವಿಶೀಲ್ಡ್ ಲಸಿಕೆಗಳನ್ನೇ ಚುಚ್ಚಿಸಿಕೊಂಡಿದ್ದಾರೆ. ಇದಲ್ಲದೇ, ಜಾಗತಿಕ ಕೋವಿಡ್ ಕಾರ್ಯಕ್ರಮದಲ್ಲಿ ಭಾರತವು ಆಫ್ರಿಕಾ 44 ದೇಶಗಳಿಗೆ ಕೋವ್ಯಾಕ್ಸಿನ್ ಲಸಿಕೆಗಳ 67 ದಶಲಕ್ಷ ಡೋಸ್‌ಗಳನ್ನು ವಿತರಿಸಿದೆ.
ಈ ಕುರಿತು ಮಾತನಾಡಿದ ಸಾರ್ವಜನಿಕ ಆರೋಗ್ಯ ಸಂಶೋಧಕ ರಮಣನ್ ಲಕ್ಷ್ಮೀನಾರಾಯಣ್, “ಲಸಿಕೆ ಮತ್ತು ವೈರಸ್‌ಗೆ ತೆರೆದುಕೊಳ್ಳುವಿಕೆಯ ಸಹಯೋಗವು ಬರೀ ಲಸಿಕೆ ಪಡೆಯುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾದ ಮದ್ದಾಗಿದೆ. ದೇಶದ ವಯಸ್ಕರ ಪೈಕಿ 40% ಮಂದಿ ಮಾತ್ರವೇ ಪೂರ್ತಿಯಾಗಿ ಲಸಿಕೆ ಪಡೆದಿದ್ದು, 90%ನಷ್ಟು ಮಂದಿ ವೈರಸ್‌ಗೆ ತೆರೆದುಕೊಂಡಿದ್ದಾರೆ,” ಎಂದಿದ್ದು, “ಭಾರತದಲ್ಲಿ ಒಮಿಕ್ರಾನ್ ವ್ಯಾಪಕವಾಗಲಿದೆ ಇದು ಶತಃಸಿದ್ಧ. ಆದರೆ ಭಾರತದಲ್ಲಿ ಲಸಿಕೆಯೊಂದಿಗೆ ವೈರಸ್‌ಗೆ ತೆರೆದುಕೊಳ್ಳುವಿಕೆಯ ಸಹಯೋಗವಿರುವ ಕಾರಣ, ಒಂದು ಮಟ್ಟಿಗೆ ನಮ್ಮಲ್ಲಿ ಈ ವಿಚಾರವಾಗಿ ರಕ್ಷಣೆ ಇದೆ,” ಎಂದಿದ್ದಾರೆ.