alex Certify BIG NEWS: ನಿಮ್ಮದೇ ಸ್ವಂತ ಮಾನವ ಬಲ ಹೆಚ್ಚಿಸಿಕೊಳ್ಳಿ; ಬಿಜೆಪಿ ಸೇರಿದಂತೆ ಅಂಗಸಂಸ್ಥೆಗಳಿಗೆ RSS ಸಂದೇಶ ರವಾನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಿಮ್ಮದೇ ಸ್ವಂತ ಮಾನವ ಬಲ ಹೆಚ್ಚಿಸಿಕೊಳ್ಳಿ; ಬಿಜೆಪಿ ಸೇರಿದಂತೆ ಅಂಗಸಂಸ್ಥೆಗಳಿಗೆ RSS ಸಂದೇಶ ರವಾನೆ

Grow your own cadres, RSS tells BJP, other Sangh Parivar affiliates

2024ರ ಲೋಕಸಭೆ ಚುನಾವಣೆ ನಡುವೆ ಆಡಳಿತ ಬಿಜೆಪಿ ಪಕ್ಷದ ಸೈದ್ಧಾಂತಿಕ ಮೂಲ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಬಿಜೆಪಿ ಸೇರಿದಂತೆ ತನ್ನ ಎಲ್ಲಾ 36 ಅಂಗಸಂಸ್ಥೆಗಳಿಗೆ ಸ್ವಾವಲಂಬಿಯಾಗುತ್ತಾ ಬೆಳೆಯಲು ಮತ್ತು ಕ್ರಮೇಣ ತಮ್ಮದೇ ಕಾರ್ಯಕರ್ತರಿಗೆ ತರಬೇತಿ ನೀಡಲು ಕೇಳಿಕೊಂಡಿದೆ. ಇದನ್ನು ಸಂಘ ಪರಿವಾರದ ಹಿರಿಯ ಸದಸ್ಯರು ಬಿಜೆಪಿ ಸೇರಿದಂತೆ ತನ್ನ ಇತರೆ ಅಂಗಸಂಸ್ಥೆಗಳಿಗೆ ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ನ ಹಿರಿಯ ನಾಯಕರು ಈಗ ಬಿಜೆಪಿ ನಾಯಕತ್ವವನ್ನು ಪೂರ್ಣಾವಧಿ ಮತ್ತು ಅರೆಕಾಲಿಕ ಕಾರ್ಯಕರ್ತರ ಸ್ವಂತ ಸೇನೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಕೇಳಿಕೊಂಡಿದ್ದಾರೆ. ಬಿಜೆಪಿಗೆ ಸಮರ್ಪಿತ ಕಾರ್ಯಪಡೆಯಾಗಿ ಕಾರ್ಯನಿರ್ವಹಿಸುವ ಈ ಕಾರ್ಯಕರ್ತರ ಸೇವೆಗಳಿಗೆ ಪಕ್ಷವು ಹಣ ಪಾವತಿಸುತ್ತದೆ. ಪ್ರಸ್ತುತ ಬಿಜೆಪಿಯು ಪಕ್ಷದ ಕೆಲಸವನ್ನು ನಿರ್ವಹಿಸಲು ಹೆಚ್ಚಿನ ಪ್ರಮಾಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಅವಲಂಬಿತವಾಗಿದೆ.

ಆರ್ ಎಸ್ ಎಸ್ ನ ಇತರ ಅಂಗಸಂಸ್ಥೆಗಳಾದ ಟ್ರೇಡ್ ಯೂನಿಯನ್ ಭಾರತೀಯ ಮಜ್ದೂರ್ ಸಂಘ (BMS), ಭಾರತೀಯ ಕಿಸಾನ್ ಸಂಘ (BKS) ಮತ್ತು ವಿಶ್ವ ಹಿಂದೂ ಪರಿಷತ್ (VHP)ತಮ್ಮದೇ ಆದ ಕೇಡರ್ ಮತ್ತು ಪೂರ್ಣ ಸಮಯದ ಕಾರ್ಯಕರ್ತರನ್ನು ಹೊಂದಿವೆ. ಇದು RSS ಪ್ರಚಾರಕರ ಮೇಲೆ ಅವಲಂಬಿತವಾಗಿಲ್ಲ

ಆರ್‌ಎಸ್‌ಎಸ್ ಸದಸ್ಯರ ಪ್ರಕಾರ, ಭಾರತದ ಒಳಗೆ ಮತ್ತು ಹೊರಗೆ ತನ್ನದೇ ಆದ ಕೆಲಸವನ್ನು ವಿಸ್ತರಿಸಲು ಹೆಚ್ಚಿನ ಮಾನವಶಕ್ತಿಯ ಅಗತ್ಯವಿದೆ. ಆದ್ದರಿಂದ ತಮ್ಮ ಸ್ವಂತ ಕಾರ್ಯಪಡೆಯನ್ನು ಬೆಳೆಸಲು ಅಂಗಸಂಸ್ಥೆಗಳಿಗೆ ಸಂದೇಶ ನೀಡಿದೆ.

ವಿದೇಶದಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುವ RSS ತನ್ನ ಪೂರ್ಣಾವಧಿಯ ಸದಸ್ಯರನ್ನು ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಆರ್ ಎಸ್ ಎಸ್ ಅಂಗಸಂಸ್ಥೆಯಾದ ಹಿಂದೂ ಸ್ವಯಂಸೇವಕ ಸಂಘ (HSS) ನಲ್ಲಿ ಕೆಲಸ ಮಾಡಲು ಕಳುಹಿಸಲು ಬಯಸುತ್ತದೆ.

ಆರ್‌ಎಸ್‌ಎಸ್‌ಗೆ ತನ್ನ ಆರೋಗ್ಯ ರಕ್ಷಣೆ ಯೋಜನೆಗಳಲ್ಲಿ ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಮಾನವಶಕ್ತಿಯ ಅಗತ್ಯವಿದೆ.

ನಾಗಪುರ ಮೂಲದ ಹಿರಿಯ ಆರ್‌ಎಸ್‌ಎಸ್ ವೀಕ್ಷಕ ದಿಲೀಪ್ ದಿಯೋಧರ್ , “ಆರ್‌ಎಸ್‌ಎಸ್ ಒಂದು ಸಾಮಾಜಿಕ ಸಂಸ್ಥೆ ಮತ್ತು ಬಿಜೆಪಿ ಒಂದು ರಾಜಕೀಯ ಸಂಘಟನೆ. ಕೆಲವು ಪೂರ್ಣ ಸಮಯದ ಆರ್‌ಎಸ್‌ಎಸ್ ಕಾರ್ಯಕರ್ತರು ಬಿಜೆಪಿಯ ಭಾಗವಾಗುವುದು ನಿಜ. ಆದರೆ ಮೂಲಭೂತವಾಗಿ ಆರ್‌ಎಸ್‌ಎಸ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆ. ಈ ಕಾರಣಕ್ಕಾಗಿಯೇ ಆರ್‌ಎಸ್‌ಎಸ್‌ನ ಕಾರ್ಯಕರ್ತರನ್ನು ಇತರ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲು ಅನುಕೂಲವಾಗುವಂತೆ ತನ್ನ ಸ್ವಂತ ಮಾನವಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಿಜೆಪಿಗೆ ತಿಳಿಸಲಾಗಿದೆ ಎಂದಿದ್ದಾರೆ.

ಸೈದ್ಧಾಂತಿಕವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಈ ಹಿಂದೆ ಬಿಜೆಪಿ ದುರ್ಬಲವಾಗಿದ್ದಾಗ ಆರೆಸ್ಸೆಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಸಹಾಯ ಮಾಡುತ್ತಿದ್ದರು ಆದರೆ ಈಗ ಬಿಜೆಪಿ ತನ್ನದೇ ಆದ ಕಾರ್ಯಕರ್ತರನ್ನು ಹೆಚ್ಚಿಸಿಕೊಳ್ಳಬೇಕು ಎಂದು ದಿಯೋಧರ್ ಪ್ರತಿಪಾದಿಸಿದರು.

ಯೋಜನೆಯ ಪ್ರಕಾರ, ಬಿಜೆಪಿ ಇನ್ನು ಮುಂದೆ ತಮ್ಮದೇ ಆದ ಕಾರ್ಯಕರ್ತರನ್ನು ನಿರ್ಮಿಸಲು ಪ್ರಯತ್ನಿಸುತ್ತದೆ ಮತ್ತು ಆರೆಸ್ಸೆಸ್ ಪ್ರಚಾರಕರನ್ನು ಅಥವಾ ಅವಿವಾಹಿತ ಪೂರ್ಣ ಸಮಯದ ಕಾರ್ಯಕರ್ತರ ಸಂಖ್ಯೆಯನ್ನು ಕ್ರಮೇಣ ಕಡಿಮೆ ಮಾಡುತ್ತದೆ.

ಆರ್‌ಎಸ್‌ಎಸ್ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಥವಾ ರಾಜ್ಯಗಳಲ್ಲಿ ಪ್ರಚಾರಕರನ್ನು ನೀಡುವುದನ್ನು ಮುಂದುವರೆಸಿದರೂ, ಅದರ ಜಿಲ್ಲಾ ಮಟ್ಟದ ಕಾರ್ಯಕರ್ತರನ್ನು ಕ್ರಮೇಣ ಹಿಂತೆಗೆದುಕೊಳ್ಳಲಾಗುತ್ತದೆ ಮತ್ತು ಬಿಜೆಪಿಯು ತಳಮಟ್ಟದಲ್ಲಿ ತನ್ನದೇ ಆದ ಸಮರ್ಪಿತ ಜನಶಕ್ತಿಯಿಂದ ಕೊರತೆಯನ್ನು ತುಂಬಬೇಕಾಗುತ್ತದೆ.

ಆರ್‌ಎಸ್‌ಎಸ್ ಮನವಿಯಲ್ಲಿ ಹೊಸದೇನೂ ಇಲ್ಲ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ. “ವಿಎಚ್‌ಪಿ ಹಲವಾರು ಆರ್‌ಎಸ್‌ಎಸ್ ಪ್ರಚಾರಕರನ್ನು ಹೊಂದಿದೆ ಆದರೆ ವಿಎಚ್‌ಪಿಯು ತನ್ನ ವಿವಿಧ ಸಂಘಟನೆಗಳಾದ ಬಜರಂಗದಳ, ದುರ್ಗಾ ವಾಹಿನಿ ಮತ್ತು ಇತರರಿಗೆ ನೇಮಕ ಮತ್ತು ತರಬೇತಿ ಪಡೆದ ಸಾವಿರಾರು ವಿಎಚ್‌ಪಿ ಕಾರ್ಯಕರ್ತರಿದ್ದಾರೆ” ಎಂದು ತಿಳಿಸಿದರು. ನಾವು ಬಹಳ ಹಿಂದೆಯೇ ನಮ್ಮ ಸ್ವಂತ ಕಾರ್ಯಕರ್ತರನ್ನು ಬೆಳೆಸಲು ಪ್ರಾರಂಭಿಸಿದ್ದೇವೆ, ಆದ್ದರಿಂದ ವಿಶ್ವಹಿಂದೂಪರಿಷತ್ ಗೆ ಇದು ಹೊಸದಲ್ಲ ಎಂದರು.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಜೆಪಿ ಈಗ ಹೆಚ್ಚು “ಸ್ವಾವಲಂಬಿಯಾಗಿದೆ” ಮತ್ತು ತನ್ನದೇ ಆದ ವ್ಯವಹಾರಗಳನ್ನು ನಿರ್ವಹಿಸಬಲ್ಲದು ಎಂದಿದ್ದರು. ಕೆಲ ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೆಲ ಬಿಜೆಪಿ ಸದಸ್ಯರು ಹೇಳುತ್ತಿದ್ದಾರೆ. ಬಿಜೆಪಿ ಪಕ್ಷದ ಸದಸ್ಯತ್ವವನ್ನು 11 ಕೋಟಿಗೆ ಹೆಚ್ಚಿಸುವ ನಿರ್ಧಾರವು ಕ್ಷೇತ್ರಗಳಲ್ಲಿ ಪಕ್ಷದ ಕೆಲಸಕ್ಕಾಗಿ ಮತ್ತು ತಳಮಟ್ಟದಲ್ಲಿ ಪಕ್ಷದ ಕೆಲಸ ಮಾಡಲು ತನ್ನ ಮಾನವಶಕ್ತಿಯನ್ನು ಸುಧಾರಿಸಿಕೊಳ್ಳಲು ಮುಂದಾಗಿದೆ. ಬಿಜೆಪಿಗಾಗಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವವರಿಗೆ ಪಕ್ಷದಿಂದ ಅವರ ಸೇವೆಗಳಿಗೆ ಹಣ ನೀಡುವ ಮತ್ತು ನಿರ್ದಿಷ್ಟ ಅವಧಿಗೆ ಅರೆಕಾಲಿಕ ಕಾರ್ಯಕರ್ತರಾಗಿ ಕೆಲಸ ಮಾಡುವ ಪಡೆ ಎಂಬ 2 ರೀತಿಯಲ್ಲಿ ಕಾರ್ಯಕರ್ತರ ಸೇರ್ಪಡೆ ಮಾಡಿಕೊಳ್ಳುವ ಯೋಚನೆ ಬಿಜೆಪಿಯಲ್ಲಿದೆ.

2024 ರ ಸಾರ್ವತ್ರಿಕ ಚುನಾವಣೆಯ ಘೋಷಣೆಗೆ ಸುಮಾರು ಎರಡು ತಿಂಗಳ ಮೊದಲು, ಬಿಜೆಪಿ ನಾಯಕತ್ವವು ವಿಕ್ಷಿತ್ ಭಾರತ್ ಎಂಬ ಪ್ಯಾನ್-ಇಂಡಿಯಾ ಸಾಮೂಹಿಕ ಸಂಪರ್ಕ ಉಪಕ್ರಮವನ್ನು ಪ್ರಾರಂಭಿಸಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವ ವಹಿಸಿದ್ದು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಪ್ರತಿ ರಾಜ್ಯಕ್ಕೆ ವೈಯಕ್ತಿಕವಾಗಿ ಭೇಟಿ ನೀಡಿದರು. ಕೇಂದ್ರ ಸರ್ಕಾರದ ವಿವಿಧ ಜನಪರ ಕಾರ್ಯಕ್ರಮಗಳಾದ ಉಜ್ವಲ ಅಥವಾ ಜನ್ ಧನ್ ಯೋಜನೆಗಳ 40 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ತಲುಪಲು ವಿಕ್ಷಿತ್ ಭಾರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿಲ್ಲ ಇದರೊಂದಿಗೆ ಪಕ್ಷದ ಸಂಘಟನಾ ಶಕ್ತಿಯನ್ನು ಪರೀಕ್ಷಿಸಲು ಕೂಡ ಈ ಉಪಕ್ರಮ ಆರಂಭಿಸಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕರು ವಿವರಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...