alex Certify ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಮನೆಯ ಬಳಿ ಬೆಳೆಸಿ ಈ ಗಿಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಮನೆಯ ಬಳಿ ಬೆಳೆಸಿ ಈ ಗಿಡ

ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಸೊಳ್ಳೆ ಕಡಿತದಿಂದ ಹಲವಾರು ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಈ ಸೊಳ್ಳೆಗಳು ಮನೆಯ ಹತ್ತಿರ ಸುಳಿಯಬಾರದಂತಿದ್ದರೆ ಈ ಗಿಡಗಳನ್ನು ಮನೆಯ ಬಳಿ ಬೆಳೆಸಿ.

*ಮಾರಿಗೋಲ್ಡ್ : ಇದು ಸೊಳ್ಳೆಗಳನ್ನು ದೂರವಿಡುತ್ತದೆ. ಇದರ ವಾಸನೆಗೆ ಸೊಳ್ಳೆಗಳಿಗೆ ಇಷ್ಟವಾಗದ ಕಾರಣ ಅವು ಇದರಿಂದ ದೂರಹೋಗುತ್ತವೆ.

*ತುಳಸಿ : ಇದು ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಇವುಗಳನ್ನು ಮನೆಯ ಬಳಿ ನೆಡುವುದರಿಂದ ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗುತ್ತದೆ. ಮಾತ್ರವಲ್ಲ ಆರೋಗ್ಯ ಕೂಡ ವೃದ್ದಿಯಾಗುತ್ತದೆ.

 *ಪುದೀನಾ : ಇದರ ಸುವಾಸನೆಯನ್ನು ಇರುವೆಗಳು, ಸೊಳ್ಳೆಗಳು ಹಾಗೂ ಕೀಟಗಳು ಇಷ್ಟಪಡುವುದಿಲ್ಲ. ಹಾಗಾಗಿ ಪುದೀನಾ ಗಿಡಗಳನ್ನು ಮನೆಯ ಹತ್ತಿರ ಬೆಳೆಸಿ.

*ಲ್ಯಾವೆಂಡರ್ : ಲ್ಯಾವೆಂಡರ್ ಎಲೆಗಳ ಸುವಾಸನೆಯನ್ನು ತಡೆದುಕೊಳ್ಳಲು ಸೊಳ್ಳೆಗಳಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಗಿಡವಿದ್ದ ಕಡೆ ಸೊಳ್ಳೆ ಸುಳಿಯುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...