ಬಿಳಿ ಬಣ್ಣದಿಂದ ವಿಶಿಷ್ಟವಾಗಿ ಕಾಣುವ ಅಲ್ಬಿನೋ ಕಾಂಗರೂಗಳು ಬಹಳ ಅಪರೂಪದ ಕಾಂಗರೂಗಳಾಗಿವೆ. ಪ್ರತಿ 50,000ಕ್ಕೆ ಒಂದರಂತೆ ಇರುವ ಅಲ್ಬಿನೋ ಕಾಂಗರೂಗಳು ಅಲ್ಬಿನಿಸಂ ಎಂಬ ದೋಷದಿಂದಾಗಿ ಪಿಗ್ಮೆಂಟೇಷನ್‌ನ ಕೊರತೆ ಉದ್ಭವಿಸುವ ಕಾರಣ ಅವುಗಳ ಕೂದಲು, ಚರ್ಮ ಹಾಗೂ ಕಣ್ಣುಗಳು ವಿಶಿಷ್ಟ ಬಣ್ಣಗಳಿಂದ ಕೂಡಿದ್ದು, ಜೊತೆಯಲ್ಲಿ ಅವುಗಳ ಚರ್ಮ ಬಿಳಿಯಾಗಿರುತ್ತದೆ.
ಅತ್ಯಪರೂಪದ ನಿದರ್ಶನವೊಂದರಲ್ಲಿ ಆಸ್ಟ್ರೇಲಿಯಾದ ಮಾರ್ನಿಂಗ್ಟನ್ ಪೆನೆನ್ಸುಲಾದ ಪನೋರಮಾ ಮತ್ತು ಸೀಕ್ರೆಟ್ ಗಾರ್ಡನ್ಸ್ ವನ್ಯಜೀವಿ ಧಾಮದಲ್ಲಿ ಬಿಳಿ ಕಾಂಗರೂಗಳ ಸಮೂಹವೊಂದು ಕಾಣಿಸಿಕೊಂಡಿದೆ.
ಅಲ್ಬಿನೋ ಹಿಂಡಿನ ಚಿತ್ರವನ್ನು ಸೆರೆ ಹಿಡಿದ ಈ ಖಾಸಗೀ ವನ್ಯಧಾಮದ ಆಡಳಿತ ಫೇಸ್ಬುಕ್‌ನಲ್ಲಿರುವ ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಈ ಚಿತ್ರಗಳನ್ನು ಕಂಡ ನೆಟ್ಟಿಗರು ಒಮ್ಮೆಲೇ ಇಷ್ಟು ಸಂಖ್ಯೆಯಲ್ಲಿ ಬಿಳಿಯ ಕಾಂಗರೂಗಳನ್ನು ಕಂಡಿರುವುದು ಅಚ್ಚರಿ ವಿಚಾರವೆಂದು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ.