ಕೆಲವರು ಹಿಂದೆಂದೂ ಕೇಳರಿಯದಂಥ ರೀತಿಯಲ್ಲಿ ವಿಸ್ಮಯವಾದಂಥ ಕೆಲಸಗಳನ್ನು, ತಂತ್ರಗಳನ್ನು ಮಾಡುವುದಿದೆ. ಸಾಹಸಮಯ ದೃಶ್ಯಕ್ಕೆ ಮೈ ನವಿರೇಳುವುದೂ ಉಂಟು. ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಹಿಂದೆಂದೂ ನೋಡಿರದ ತಂತ್ರವನ್ನು ಬಳಸಿಕೊಂಡು ಆರು ಮಂದಿಯ ಗುಂಪು 30 ಸೆಕೆಂಡ್‌ಗಳಲ್ಲಿ ಗೋಡೆಯನ್ನು ಏರುವ ವಿಡಿಯೋ ಇದಾಗಿದೆ.
“ತನ್ಸು ಯೆಗೆನ್” ಎನ್ನುವವರು ಈ ವಿಡಿಯೋ ಶೇರ್ ಮಾಡಿದ್ದಾರೆ. “ನೀವು ನಿಮ್ಮನ್ನು ಮೇಲಕ್ಕೆತ್ತಲು ಬಯಸಿದರೆ, ಮೊದಲು ಬೇರೆಯವರನ್ನು ಮೇಲಕ್ಕೆತ್ತಿ” ಎಂಬ ಅರ್ಥಪೂರ್ಣ ಶೀರ್ಷಿಕೆ ನೀಡಿದ್ದು ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆರು ಜನರ ಗುಂಪು ಕೌಶಲ್ಯದಿಂದ ಗೋಡೆ ಹತ್ತುತ್ತಿರುವುದನ್ನು ನೋಡಬಹುದಾಗಿದೆ. ಒಬ್ಬರ ಮೇಲೊಬ್ಬರು ಹತ್ತಿ ಕೇವಲ ಅರ್ಧ ನಿಮಿಷದಲ್ಲಿ ಈ ಗೋಡೆಯನ್ನು ಹತ್ತಿದ್ದಾರೆ.
ವಿಡಿಯೋ ಕೇವಲ 9 ದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, 35 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಇದು ಕೇವಲ ವಿಡಿಯೋ ಅಲ್ಲ, ಬದಲಿಗೆ ಜೀವನ ಸಂದೇಶ ಕೂಡ ಎಂದಿದ್ದಾರೆ ಹಲವು ಕಮೆಂಟಿಗರು.