alex Certify ಹೃದಯದ ಆರೋಗ್ಯಕ್ಕೆ‌ ಬೆಸ್ಟ್ ‘ನೆಲಗಡಲೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯದ ಆರೋಗ್ಯಕ್ಕೆ‌ ಬೆಸ್ಟ್ ‘ನೆಲಗಡಲೆ’

ಫಲಾಹಾರದಲ್ಲಿ ಇಡ್ಲಿ, ದೋಸೆಗಳಿಗೆ ಮಾಡುವ ಚಟ್ನಿಗಳಿಗೆ ನೆಲಗಡಲೆ ಹಾಕುತ್ತಾರೆ. ಇದು ದೇಹಕ್ಕೆ ನೀಡುವ ಒಳಿತು ಅಲ್ಪಸ್ವಲ್ಪವಲ್ಲ.

ಇದರಲ್ಲಿ ಸ್ಯಾಚುರೇಟೆಡ್ ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬುಗಳಿವೆ. ಇವು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿನ ಒಲೈಕ್ ಆಸಿಡ್ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲನ್ನು ಹೃದಯಕ್ಕೆ ನೀಡುತ್ತದೆ. ಅಷ್ಟೇ ಅಲ್ಲದೇ…

* ಕೆಲವು ಬಗೆಯ ಕ್ಯಾನ್ಸರ್ ನಿವಾರಣೆಯಲ್ಲಿ ಇದು ಉತ್ತಮವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಬೀಟಾ ಸಿಟೋಸ್ಟೆರಾಲ್ ಇರುತ್ತದೆ. ಇದು ಕ್ಯಾನ್ಸರ್ ಕಾರಕವನ್ನು ನಿವಾರಿಸುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ನೆಲಗಡಲೆ ತಿನ್ನುವವರಲ್ಲಿ ಕ್ಯಾನ್ಸರ್ ಸಾಧ್ಯತೆ ಶೇಕಡಾ 27 ರಿಂದ 58 ರಷ್ಟು ತಗ್ಗಿರುವುದಾಗಿ ಅಧ್ಯಯನದಲ್ಲಿ ತಿಳಿಸಲಾಗಿದೆ.

* ಗರ್ಭಿಣಿಯರಿಗೆ ನೆಲಗಡಲೆ ಮಾಡುವ ಒಳಿತು ಅಷ್ಟಿಷ್ಟಲ್ಲ. ಇದರಲ್ಲಿ ಫೋಲೆಟ್ ಕೂಡ ಇದೆ. ಅಲರ್ಜಿ, ಉಬ್ಬಸ ಬರುವುದು ಕೂಡ ಇದರಿಂದ ತಗ್ಗುತ್ತದೆ.

* ಮಗು ಬೆಳೆಯಲು ಮಾಂಸ ಪೇಸಿಗಳ ಬೆಳವಣಿಗೆಗೆ ಮುಖ್ಯ. ಅವು ನೆಲಗಡಲೆಯಿಂದ ಸಾಧ್ಯ. ಇದರಿಂದ ಮೆದುಳು ಚುರುಕಾಗುವುದಲ್ಲದೆ, ಆಲೋಚನಾಶಕ್ತಿ ಚೆನ್ನಾಗಿರುತ್ತದೆ.

* ತೂಕ ಸಮತೋಲನದಲ್ಲಿಡುವಲ್ಲಿ ಒಳ್ಳೆಯ ರೀತಿಯಲ್ಲಿ ಇದು ಕೆಲಸ ಮಾಡುತ್ತದೆ. ನಾರು, ಕೊಬ್ಬು, ಪಿಷ್ಟ ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ. ಶರೀರಕ್ಕೆ ಅಗತ್ಯದ ಶಕ್ತಿ ದೊರೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...