ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೆ ಕಾಯಿ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಹಾಗಿದ್ದರೆ ಏನೀ ಪ್ರಯೋಜನ
ಕಡಲೆಕಾಯಿಯಲ್ಲಿ ಪ್ರೊಟೀನ್, ವಿಟಮಿನ್ ಇ, ಫೈಬರ್ ಮತ್ತಿತರ ಅಂಶಗಳಿದ್ದು ಆರೋಗ್ಯಕರ ಫ್ಯಾಟ್ ಅನ್ನು ಇದು ಉತ್ಪಾದಿಸುತ್ತದೆ. ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತ್ವಚೆಯ ಆರೋಗ್ಯವನ್ನು ಕಾಪಾಡಿ ನಿಮ್ಮನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ.
ಆಂಟಿ ಆಕ್ಸಿಡೆಂಟ್ ಆಗಿಯೂ ಕೆಲಸ ಮಾಡುವ ಕಡಲೆ ಕಾಯಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಬ್ಲಡ್ ಪ್ರೆಶರ್ ಪ್ರಮಾಣವನ್ನು ಕಡಿಮೆ ಮಾಡಿ ಮೆದುಳಿನ ಚಟುವಟಿಕೆಗಳನ್ನು ಆರೋಗ್ಯವಾಗಿ ನಡೆಸಲು ಸಹಾಯ ಮಾಡುತ್ತದೆ.
ತೂಕ ಕಡಿಮೆ ಮಾಡಲು ಬಯಸುವವರು ಹಿಂದಿನ ರಾತ್ರಿ ನೆನೆಹಾಕಿದ ನೆಲಕಡಲೆಗೆ ಚಿಟಿಕೆ ಉಪ್ಪು ಹಾಗು ನಿಂಬೆರಸ ಬೆರೆಸಿ ಬೆಳಗಿನ ತಿಂಡಿಗೂ ಮುನ್ನ ಸೇವಿಸುವುದರಿಂದ ಕ್ರಮೇಣ ಕೊಬ್ಬು ಕರಗಿ ದೇಹ ತೂಕ ಕಡಿಮೆಯಾಗುತ್ತದೆ.
ಕಡಲೆಕಾಯಿಯನ್ನು ಎಣ್ಣೆಯಲ್ಲಿ ಹುರಿದು ತಿನ್ನುವುದರಿಂದ ಅದರ ಹಲವು ಉತ್ತಮ ಗುಣಗಳು ನಾಶವಾಗುತ್ತವೆ. ಹಾಗಾಗಿ ಹಸಿಯಾಗಿಯೇ ತಿನ್ನುವುದು ಒಳ್ಳೆಯದು.