ಮದುವೆ ಅನ್ನೋದು ಹೆಣ್ಣು ಮತ್ತು ಗಂಡಿನ ಜೀವನದ ಅತಿದೊಡ್ಡ ಘಟ್ಟ. ಇಂತಹ ದೊಡ್ಡ ದಿನದಂದು ಶೃಂಗಾರಗೊಂಡಿರುವ ತನ್ನ ವಧುವನ್ನು ನೋಡಲು ಪ್ರತಿಯೊಬ್ಬ ವರನಲ್ಲೂ ಹೇಳಿಕೊಳ್ಳಲಾಗದ ತವಕ ಇರುತ್ತದೆ. ಇಂತಹದ್ದೇ ಒಂದು ಸುಂದರ ವಿಡಿಯೋ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ.
@wedding_fairs ಎಂಬ ಇನ್ಸ್ಟಾಗ್ರಾಮ್ ಹ್ಯಾಂಡಲ್ ಪೋಸ್ಟ್ ಮಾಡಿರುವ ವಿಡಿಯೋ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಮೆಹಂದಿ ಸಂಭ್ರಮಕ್ಕೆ ಸಿದ್ಧವಾಗಿದ್ದ ತನ್ನ ಒಡತಿಯನ್ನ ನೋಡಿದ ವರನ ರಿಯಾಕ್ಷನ್ ವಿಡಿಯೋ ಇದಾಗಿದೆ.
BIG NEWS: ವಿಧಾನಸಭೆಯಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ; ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ
ಈ ಕ್ಲಿಪ್ ನಲ್ಲಿ ವರ ರಿಷಿ, ತನ್ನ ವಧು ಸೌಮ್ಯಳನ್ನು ನೋಡಲು ಕೋಣೆಯೊಂದಕ್ಕೆ ಎಂಟ್ರಿ ಕೊಡುತ್ತಾರೆ. ಮೆಹಂದಿ ಕಾರ್ಯಕ್ರಮಕ್ಕೆ ತಯಾರಾಗಿ ಕಂಗೊಳಿಸುತ್ತಿದ್ದ ವಧು ಸೌಮ್ಯ ವರ್ಮಾರನ್ನು ನೋಡಿದ ವರ, ರಿಷಿ ಮೂಕವಿಸ್ಮಿತನಾಗಿದ್ದಾನೆ. ಆಕೆಯ ಬಳಿ ಹೋದ ವರ ಆಕೆಯ ಕೈಯನ್ನು ಚುಂಬಿಸಿದ್ದಾನೆ. ಅವಳ ಮೇಕ್ಅಪ್ ಹಾಳಾಗಬಾರದು ಎಂಬ ಕಾರಣಕ್ಕೆ ಅವಳ ಕೆನ್ನೆಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾನೆ.
ಈ ವಿಡಿಯೋ ನೋಡಿದ ನೆಟ್ಟಿಗರು ವಧು-ವರನನ್ನು ಮೆಚ್ಚಿಕೊಂಡಿದ್ದಾರೆ. ನಿಮ್ಮ ಜೋಡಿ ತುಂಬಾ ಕ್ಯೂಟ್ ಆಗಿದೆ ಎಂದು ಹಾಡಿ ಹೊಗಳಿದ್ದಾರೆ. ಇತ್ತೀಚಿಗೆ ಅಪ್ಲೋಡ್ ಆಗಿರುವ ಈ ವಿಡಿಯೋ 30 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನ ಗಳಿಸಿಕೊಂಡು, ಮತ್ತಷ್ಟು ವೈರಲ್ ಆಗುತ್ತಿದೆ.
https://www.youtube.com/watch?v=SyomkJQ72aw&feature=youtu.be