ಮದುವೆಗಳು ಸಂಭ್ರಮದ, ಸಂತೋಷದ ಕ್ಷಣಗಳು. ಇಂತಹ ಸಂಭ್ರಮಾಚರಣೆ ವೇಳೆ ಅನಿರೀಕ್ಷಿತ ಘಟನೆಗಳು ಜರುಗುತ್ತಿರುತ್ತಲೇ ಇರುತ್ತವೆ.
ವಧು- ವರ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲಿ ನಡೆದ ಅದೊಂದು ಸನ್ನಿವೇಶದ ವಿಡಿಯೋ ವೈರಲ್ ಆಗಿದೆ.
ವಧು, ವರನಿಗೆ ಮಾಲೆ ಹಾಕುತ್ತಾಳೆ. ವರನು ಸಹ ಮಾಲೆಯನ್ನು ಹಾಕಲು ಹೊರಟಾಗ ಅವನ ಪೈಜಾಮ ಕೆಳಗೆ ಬೀಳುತ್ತಿರುತ್ತದೆ.
ಇದನ್ನು ಗಮನಿಸಿದ ವಧು ಮುಸಿ ಮುಸಿ ನಗುತ್ತಿದ್ದರೆ, ವರ ಮುಜುಗರಕ್ಕೀಡಾಗಿ ವೇದಿಕೆಯಿಂದ ಪಕ್ಕಕ್ಕೆ ಹೋಗುತ್ತಾನೆ.
ಮದುವೆ ಮನೆಯಲ್ಲಿ ಇತ್ತೀಚಿನ ದಿನಗಳಲ್ಲಿ ನೋಡಿದ ತಮಾಷೆಯ ವೀಡಿಯೊ ಇದಾಗಿದೆ ಎಂದು ನೆಟ್ಟಿಗರು ನಗುತ್ತಿದ್ದಾರೆ. ಇಂತಹ ಸಮಯದಲ್ಲೂ ನಗುತ್ತಿದ್ದ ವಧುವನ್ನೂ ಸಹ ಕೊಂಡಾಡಿದ್ದಾರೆ.
https://twitter.com/HasnaZarooriHai/status/1636221529422807044?ref_src=twsrc%5Etfw%7Ctwcamp%5Etweetembed%7Ctwterm%5E1636221529422807044%7Ctwgr%5Ea2caf29dbab476473c09d074eca314adf918da73%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiac2390847183200-epaper-dhf6af4a9befa548589eba0f15b9db5a4f%2Fgroomspantrollsdownduringjaimalabridesreactionispricelesswatch-newsid-n481825270