alex Certify ಹೆಚ್ಚಿನ ವರದಕ್ಷಿಣೆ ಡಿಮ್ಯಾಂಡ್‌ ಮಾಡಿದ ವರನಿಗೆ ಕಲ್ಯಾಣ ಮಂಟಪದಲ್ಲೇ ಬಿತ್ತು ಒದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚಿನ ವರದಕ್ಷಿಣೆ ಡಿಮ್ಯಾಂಡ್‌ ಮಾಡಿದ ವರನಿಗೆ ಕಲ್ಯಾಣ ಮಂಟಪದಲ್ಲೇ ಬಿತ್ತು ಒದೆ

ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ವರನಿಗೆ ಜನರು ಮನಬಂದಂತೆ ಥಳಿಸಿದ ಘಟನೆಯೊಂದು ಉತ್ತರ ಪ್ರದೇಶ ಘಾಜಿಯಾಬಾದ್​​ನ ಸಾಹಿಬಾಬಾದ್​​ ಪ್ರದೇಶದಲ್ಲಿ ನಡೆದಿದೆ.

ವರನಿಗೆ ಥಳಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸಾಹಿಬಾಬಾದ್​ನ ಬ್ಯಾಂಕ್ವೆಟ್​ ಹಾಲ್​ನಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ಶೆರ್ವಾನಿ ಧರಿಸಿದ್ದ ವ್ಯಕ್ತಿಯನ್ನು ಸುತ್ತುವರಿದ ಜನರು ಸರಿಯಾಗಿ ಥಳಿಸಿದ್ದಾರೆ. ವರ ಎಂದು ಹೇಳಲಾದ ವ್ಯಕ್ತಿಯನ್ನು ಎಳೆದುಕೊಂಡು ಹೋಗಿ ಥಳಿಸಲಾಗಿದೆ.

ಕೊನೆಗೆ ವರನ ಸಂಬಂಧಿ ಎನ್ನಲಾದ ಮಹಿಳೆಯು ಆತನನ್ನು ರಕ್ಷಿಸಿದ್ದಾಳೆ. ಬ್ಯಾಂಕ್ವೆಟ್​ ಹಾಲ್​ನ ಸಿಬ್ಬಂದಿ ಹಾಗೂ ಮದುವೆಗೆ ಆಗಮಿಸಿದ್ದ ಇತರೆ ಅತಿಥಿಗಳು ಈ ಘಟನೆಯ ವಿಡಿಯೋವನ್ನು ಚಿತ್ರೀಕರಿಸುವಲ್ಲಿಯೇ ನಿರತರಾಗಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ವಧುವಿನ ಕಡೆಯವರು ವರನಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ವರನ ತಂದೆಯು 10 ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮದುವೆ ನಿಲ್ಲಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ.

ವರದಿಗಳ ಪ್ರಕಾರ ವಧುವಿನ ಕಡೆಯವರು ಈಗಾಗಲೇ 3 ಲಕ್ಷ ರೂಪಾಯಿ ನಗದು ಹಾಗೂ 1 ಡೈಮಂಡ್​ ಉಂಗುರವನ್ನು ನೀಡಿದ್ದರು. ಆದರೂ ಸಹ ವರನ ಕಡೆಯವರಿಗೆ ಸಮಾಧಾನವಿರಲಿಲ್ಲ. ವಧುವಿನ ಕಡೆಯವರು ಸಾಕಷ್ಟು ಮನವಿ ಮಾಡಿದ ಬಳಿಕವೂ ವರನ ಕಡೆಯವರು ಬೇಡಿಕೆ ಮುಂದುವರಿಸಿದ್ದಾರೆ. ಇದರಿಂದ ಕೋಪಗೊಂಡ ವಧುವಿನ ಕಡೆಯವರು ವರನಿಗೆ ಥಳಿಸಿದ್ದಾರೆ ಎನ್ನಲಾಗಿದೆ.

ಈ ವರ ಈ ಹಿಂದೆಯೇ 2-3 ಮದುವೆಯಾಗಿದ್ದ ಎಂದು ವಧುವಿನ ಕಡೆಯವರು ಆರೋಪಿಸಿದ್ದಾರೆ. ವರನನ್ನು ಆಗ್ರಾದ ನಿವಾಸಿ ಮುಝಾಮಿಲ್​ ಎಂದು ಗುರುತಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...