ಇತ್ತೀಚೆಗಿನ ಭಾರತೀಯ ವಿವಾಹ ಕಾರ್ಯಕ್ರಮಗಳಲ್ಲಿ ನೃತ್ಯವಿಲ್ಲದಿದ್ರೆ ಮದುವೆಯೇ ಅಪೂರ್ಣವೆಂದೆನಿಸುತ್ತದೆ. ಮದುವೆ ಅಂದ್ರೆ ಮೋಜು-ಮಸ್ತಿ, ಡ್ಯಾನ್ಸ್, ತಮಾಷೆ ಇರಲೇಬೇಕು ಎಂಬಂತಾಗಿದೆ.
ಸಾಮಾನ್ಯವಾಗಿ ವಧು, ಅಥವಾ ವಧು-ವರ ಜೊತೆಲೀ ನೃತ್ಯ ಮಾಡಿರುವಂತಹ ವಿಡಿಯೋಗಳು ಅತಿ ಹೆಚ್ಚಾಗಿ ವೈರಲ್ ಆಗಿದೆ. ಆದರೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ, ಖಂಡಿತ ನೀವು ಇಷ್ಟಪಡುತ್ತೀರಾ.
ಹೌದು, ಮದುವೆ ಸಂಭ್ರಮದಲ್ಲಿ ದೇಸಿ ವರನೊಬ್ಬ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರನನ್ನು ಭರತ್ ಧಿಂಗ್ರಾ ಎಂದು ಗುರುತಿಸಲಾಗಿದೆ. ರಣಬೀರ್ ಕಪೂರ್ ಅಭಿನಯದ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಕ್ಯೂಟಿಪೀ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ಇತರೆ ಪುರುಷರೊಂದಿಗೆ ವರ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ವರನ ಅದ್ಭುತ ನೃತ್ಯ ಕಂಡ ಅತಿಥಿಗಳು ಕೂಡ ಹುರಿದುಂಬಿಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ವಧು ಕೊಟ್ಟ ರಿಯಾಕ್ಷನ್ ಇದರ ಕೇಂದ್ರ ಬಿಂದುವಾಗಿದೆ. ವೇದಿಕೆಯ ಮೇಲೆ ವರ ತನ್ನ ಜೊತೆಗಾರರ ಜೊತೆ ಕುಣಿಯುತ್ತಿದ್ದರೆ, ವೇದಿಕೆ ಕೆಳಗೆ ನಿಂತಿದ್ದ ವಧು, ಡ್ಯಾನ್ಸ್ ಮಾಡುತ್ತಿದ್ದ ವರನನ್ನು ಮತ್ತಷ್ಟು ಹುರಿದುಂಬಿಸಿದ್ದಾಳೆ.
ದಿ ವೆಡ್ಡಿಂಗ್ ಮಿನಿಸ್ಟ್ರಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರಂತೂ ಸಖತ್ ಖುಷಿಯಾಗಿದ್ದು, ಕಮೆಂಟ್ ಬಾಕ್ಸ್ ನಲ್ಲಿ ಪ್ರೀತಿ ಮತ್ತು ಹೃದಯದ ಎಮೋಜಿಗಳನ್ನು ತುಂಬಿದ್ದಾರೆ.
https://www.youtube.com/watch?v=pGg3cjsW1WU