ವಿವಾಹದ ದಿನವೇ ವರ ಆಸ್ಪತ್ರೆ ಸೇರಿದ್ರೂ ನಡೆಯಿತು ಮದುವೆ..! 26-11-2021 7:28AM IST / No Comments / Posted In: Latest News, Live News, International ಇನ್ನೇನು ಮದುವೆಯ ದಿನ ಬಂದೇ ಬಿಟ್ಟಿತು ಅನ್ನೋವಾಗ ವಿಷಾಹಾರ ಸೇವನೆಯಿಂದ ವರ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮದುವೆಗೆ ವರನೇ ಗೈರಾದರೂ ಕೂಡ, ಅವರು ನಿರ್ಧರಿಸಿದ ಸ್ಥಳದಲ್ಲಿ ಮದುವೆ ನಡೆದಿದೆ. ಅರೆ….. ಅದು ಹೇಗೆ ಅಂತಾ ಆಶ್ಚರ್ಯನಾ..? ಮುಂದೆ ಓದಿ. ಯಂಗ್ಸ್‌ವಿಲ್ಲೆಯ ನಾರ್ತ್ ಕೆರೊಲಿನಾ ದಂಪತಿಗಳು ಆಯ್ಕೆ ಮಾಡಿದ ಮದುವೆಯ ಸ್ಥಳ, ವಧು ಮತ್ತು ವರನ ವಿಡಿಯೊವನ್ನು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವರನಿಲ್ಲದೆ ಈ ರೀತಿಯು ಮದುವೆಯಾಗಬಹುದು ಎಂಬುದನ್ನು ಈ ಜೋಡಿ ತೋರಿಸಿಕೊಟ್ಟಿದ್ದಾರೆ. ಕೋಲಿನಾಕೃತಿಗೆ ಸೂಟ್ ತೊಡಿಸಿ ಅದರ ಮೇಲೆ ವರನ ಫೋಟೋ ಇಡಲಾಗಿತ್ತು. ವಧು ತನ್ನ ತಾತ್ಕಾಲಿಕ ವರನೊಂದಿಗೆ ಕೇಕ್ ಕತ್ತರಿಸಿ ಅವನೊಂದಿಗೆ ನೃತ್ಯ ಕೂಡ ಮಾಡಿದ್ದಾಳೆ. ಮದುವೆಗೆ ಬಂದಿದ್ದ ಅತಿಥಿಗಳು ದಂಪತಿಗಳ ಜೊತೆ ಫೋಟೋ ಕ್ಲಿಕ್ಕಿಸಿದ್ದಾರೆ. ತನ್ನ ಮದುವೆಯನ್ನು ವಿಶೇಷವಾಗಿ ಮಾಡಿದ್ದಕ್ಕಾಗಿ ವರನು ದಿ ವಿಕ್ಟೋರಿಯನ್ ಗೆ ಧನ್ಯವಾದಗಳನ್ನು ಅರ್ಪಿಸಿದ್ದಾನೆ. ಈಗಾಗಲೇ ಇವರ ಮದುವೆಯು ಸಾಂಕ್ರಾಮಿಕ ರೋಗದ ಕಾರಣದಿಂದ ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಪರಸ್ಪರ 8 ವರ್ಷದಿಂದ ಈ ಜೋಡಿ ಪ್ರೀತಿಸುತ್ತಿದ್ದು, ಇದೀಗ ವಿಭಿನ್ನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಸಾಂಪ್ರದಾಯಿಕ ವಿವಾಹದ ಕುರಿತು ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಮದುವೆ ನಿಂತು ಹೋಗುತ್ತೆ ಅಂತಾ ಠೇವಣಿ ಕಳೆದುಕೊಳ್ಳಲು ನೀವು ಇಷ್ಟಪಡದಿದ್ದರೆ ಈ ರೀತಿ ಕೂಡ ಮದುವೆಯಾಗಬಹುದು ಎಂದು ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾನೆ. ಅವಳೀಗ ಅವನ ಐಪ್ಯಾಡ್ ಅನ್ನು ಮದುವೆಯಾಗಿದ್ದಾಳೆ ಅಂತಾ ಮತ್ತೊಬ್ಬ ಬಳಕೆದಾರ ವ್ಯಂಗ್ಯ ಮಾಡಿದ್ದಾನೆ.