ಕೆಲವು ಮದುವೆಯ ನೃತ್ಯಗಳು ವಿಸ್ಮಯಕಾರಿ ಮೋಜನ್ನು ನೀಡುತ್ತವೆ. ಇಡೀ ಕುಟುಂಬವು ನೃತ್ಯದ ವೇದಿಕೆಯಲ್ಲಿ ಸೇರಿಕೊಂಡಾಗ ಮತ್ತು ಢೋಲ್ನ ಬೀಟ್ಗಳಿಗೆ ಹೆಜ್ಜೆ ಹಾಕುವ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಅಂಥದ್ದೇ ಒಂದು ಸುಂದರ ನೃತ್ಯದ ವಿಡಿಯೋ ವೈರಲ್ ಆಗಿದೆ.
ಈಗ ವೈರಲ್ ಆಗಿರುವ ವೀಡಿಯೋದಲ್ಲಿ ವರ, ಆತನ ಆಪ್ತರು ಮತ್ತು ವಧು ಮುಝಸೆ ಶಾದಿ ಕರೋಗಿಗೆ ನೃತ್ಯ ಮಾಡುವುದನ್ನು ನೀವು ನೋಡಬಹುದು.
ಈ ವಿಡಿಯೋವನ್ನು ಶುಭವಿವಾಹ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ವಧು ಮತ್ತು ವರ ಮುಖಾಮುಖಿಯಾಗಿ ನಿಂತಿರುವುದನ್ನು ತೋರಿಸುತ್ತದೆ. ವರನ ಆಪ್ತರು ಮತ್ತು ಕುಟುಂಬದವರು ಆತನ ಬೆನ್ನಿಗೆ ನಿಂತಿದ್ದಾರೆ. ಸಂಗೀತ ನುಡಿಸುತ್ತಿದ್ದಂತೆ, ಅವರೆಲ್ಲರೂ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ವಧು ಕೂಡ ವರನೊಂದಿಗೆ ಸೇರುತ್ತಾಳೆ. ಇದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ವೀಡಿಯೊವನ್ನು ಮಾರ್ಚ್ 23 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದನ್ನು 53,000 ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ. ವೀಡಿಯೊಗೆ ಹಲವಾರು ಕಾಮೆಂಟ್ಗಳೂ ಇವೆ.
https://youtu.be/OcEcwK3vil0