ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮನೆಯ ಯಜಮಾನಿಗೆ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ನೋಂದಣಿ ಇಂದು ಇರುವುದಿಲ್ಲ.
ಇಂದು ಭಾನುವಾರ ಆಗಿರುವುದರಿಂದ ಗೃಹಲಕ್ಷ್ಮಿ ಅರ್ಜಿ ನೋಂದಣಿ ಇಲ್ಲ ಇರುವುದಿಲ್ಲ. ಭಾನುವಾರ ರಜಾ ದಿನ ಹಿನ್ನೆಲೆಯಲ್ಲಿ ನೋಂದಣಿಯೂ ಇರುವುದಿಲ್ಲ. ಶನಿವಾರವಾದ ನಿನ್ನೆ ಒಂದೇ ದಿನ 14,16,462 ಅರ್ಜಿ ನೋಂದಣಿಯಾಗಿದ್ದು, ಈ ಮೂಲಕ ಒಟ್ಟು ಮೂರು ದಿನಕ್ಕೆ ರಾಜ್ಯಾದ್ಯಂತ 22.90,782 ಅರ್ಜಿ ಸಲ್ಲಿಕೆಯಾಗಿವೆ.
ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಯ ಮೋಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ ಹಾಗೂ ನೊಂದಣಿ ಕೇಂದ್ರದ ವಿವರಗಳನ್ನು ಎಸ್.ಎಂ.ಎಸ್. ಮೂಲಕ ತಿಳಿಸಲಾಗುತ್ತದೆ.ಮೊದಲಿಗೆ ಹೆಡ್ ಆಫ್ ದ ಫ್ಯಾಮಿಲಿ ಆಧಾರ್ ಕಾರ್ಡ್ ಅಲ್ಲಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 8147500500 ಈ ಮೊಬೈಲ್ ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು SMS ಮೂಲಕ ಕಳುಹಿಸಬೇಕು.
SMS ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ನಿಮಗೆ VM-SEVSIN ಕರ್ನಾಟಕ ಸರ್ಕಾರದ ವತಿಯಿಂದ ನೀವು ಯಾವ ದಿನಾಂಕದಲ್ಲಿ ಯಾವ ಸಮಯಕ್ಕೆ ಯಾವ ಸ್ಥಳದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂಬ ಮೆಸೇಜ್ ಬರುತ್ತದೆ. ಒಂದು ವೇಳೆ ಮೆಸೇಜ್ ಬಾರದಿದ್ದರೆ ಅದು ಸರ್ವರ್ ಸಮಸ್ಯೆ ಆಗಿರುತ್ತದೆ, ಆದ್ದರಿಂದ ಮತ್ತೆ ನೀವು ಸಂದೇಶ ಕಳುಹಿಸಬೇಕು. ನಿಮಗೆ SMS ಮೂಲಕ ಯಾವ ಗ್ರಾಮದಲ್ಲಿ ಯಾವ ಕೇಂದ್ರದಲ್ಲಿ ಯಾವ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ಬರುತ್ತದೆ.
ಮೆಸೇಜ್ ಕಳುಹಿಸಿದ್ರು ರಿಪ್ಲೈ ಬರುತ್ತಿಲ್ಲವಾ.? ಇಲ್ಲಿದೆ ಪರಿಹಾರ
ನಿಮ್ಮ ಮೆಸೇಜ್ ಗೆ ರಿಪ್ಲೈ ಬಂದಿಲ್ಲ ಎಂದರೆ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿರಬಹುದು. ಗೃಹಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ https://sevasindhugs.karnataka.gov.in/ ಗೆ ಭೇಟಿ ನೀಡಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ ನೀವು ಅರ್ಜಿ ಸಲ್ಲಿಸುವ ವೇಳಾಪಟ್ಟಿ ಚೆಕ್ ಮಾಡಿಕೊಳ್ಳಬಹುದು.
ಸರ್ಕಾರ ಈ ಮೊದಲು 8147500500 ಸಹಾಯವಾಣಿ ಸಂಖ್ಯೆಗೆ SMS ಕಳುಹಿಸಿ ಸ್ಲಾಟ್ ಬುಕಿಂಗ್ ಸೂಚಿಸಿತ್ತು, ಈಗ ಮತ್ತೊಂದು ಸಹಾಯವಾಣಿ ಸಂಖ್ಯೆಯನ್ನು ಕೂಡ ನೀಡಿದೆ. 8277000555 ಸಹಾಯವಾಣಿ ಸಂಖ್ಯೆಗೂ ಕೂಡ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ ನೋಂದಣಿ ವೇಳಾಪಟ್ಟಿ ಪಡೆದುಕೊಳ್ಳಬಹುದು.
ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಗ್ರಾಮದ ಸಮೀಪವಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಸಮೀಪದ ಕರ್ನಾಟಕ ಒನ್, ವಾರ್ಡ ಕಛೇರಿ, ಸ್ಥಳಿಯ ನಗರಾಡಳಿತ ಸಂಸ್ಥೆಯ ಕಛೇರಿ, ಗೃಹಲಕ್ಷ್ಮೀ ನೋಂದಣಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.