ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ರಾಜ್ಯದ ಹಲವು ಮಹಿಳೆಯರಿಗೆ 2 ನೇ ಕಂತು ಖಾತೆಗೆ ಜಮಾ ಆಗಿದ್ದು, ಬ್ಯಾಂಕ್ ಖಾತೆ ಇದ್ದು, ಖಾತೆಗೆ ಹಣ ಬಾರದೇ ಇರುವವರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.
ಅರ್ಜಿ ಸಲ್ಲಿಸಿ ಗೃಹ ಲಕ್ಷ್ಮಿ ಯೋಜನೆಯ ಹಣ ಬಾರದೇ ಇರುವ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಅಂಚೆ ಇಲಾಖೆಯಲ್ಲಿ ಖಾತೆ ಮಾಡಿಸಿದ್ರೆ ಅಂಚೆ ಇಲಾಖೆಯ ಖಾತೆಗೂ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ.
ಅಕ್ಟೋಬರ್ ನಲ್ಲಿ ಅರ್ಜಿ ಸಲ್ಲಿಸಿ ಮೂರು ತಿಂಗಳು ಕಳೆದ್ರೂ ಹಣ ಬಾರದ ಯಜಮಾನಿ ಮಹಿಯರಿಗೆ 100% ಹಣ ಬರಲಿದೆ. ಒಂದು ವೇಳೆ ಬಾರದಿದ್ರೂ ಅಂಚೆ ಇಲಾಖೆಯಲ್ಲಿ ಖಾತೆ ತೆರೆದು, ಅದರ ಸಂಖ್ಯೆಯನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಮಾಡಿದ್ರೂ ಆ ಬ್ಯಾಂಕ್ ಖಾತೆಗೆ 2000 ಹಣ ಜಮಾ ಆಗಲಿದೆ.
ನೀವು ನಿಮ್ಮ ಗ್ರಾಮದ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದು ಆ ಬ್ಯಾಂಕ್ ಖಾತೆಯನ್ನೇ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಿ ಆಗ ಖಂಡಿತವಾಗಿಯೂ ನಿಮಗೆ ಈ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರಲಿದೆ.