ಶಿವಮೊಗ್ಗ: ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಎಸಿ, ಫ್ಯಾನ್, ಕೂಲರ್, ಮನೆಗೆ, ಕೈತೋಟ ಪಂಪ್ ಗಳ ಬಳಕೆ ಅಧಿಕವಾಗಿದೆ. ವಿದ್ಯುತ್ ಬಳಕೆ ಹೆಚ್ಚಾಗಿರುವುದರಿಂದ ಗೃಹಜೋತಿ ಗ್ರಾಹಕರು ಕೂಡ ಸಾಮಾನ್ಯ ಗ್ರಾಹಕರಂತೆ ಎಲ್ಲಾ ಯೂನಿಟ್ ಗೂ ನಿಗದಿತ ದರದಂತೆ ಬಿಲ್ ಪಾವತಿಸಬೇಕಿದೆ.
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ತೀವ್ರ ಹೆಚ್ಚಾಗಿದೆ. ಗೃಹಜ್ಯೋತಿ ಬಳಕೆದಾರರಿಗೆ 2022 -23ನೇ ಸಾಲಿನ ವಾರ್ಷಿಕ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗಿದೆ. ನಿಗದಿತ ಸರಾಸರಿಗಿಂತ 150 ಉಚಿತ ಯೂನಿಟ್ ಗಿಂತ 50 ಯೂನಿಟ್ ಹೆಚ್ಚು ಬಳಕೆ ಮಾಡಿದ್ದಲ್ಲಿ ಪ್ರತಿ ಯೂನಿಟ್ ಗೆ 7 ರೂ. ಪಾವತಿಸಬೇಕಿದೆ. ಈಗ ಬಿಸಿಲ ಕಾರಣಕ್ಕೆ ವಿದ್ಯುತ್ ಬಳಕೆ ಶೇಕಡ 20ರಷ್ಟು ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ಗೃಹಜ್ಯೋತಿ ಬಳಕೆದಾರರು ಕೂಡ ಸಾಮಾನ್ಯ ಗ್ರಾಹಕರಂತೆ ಎಲ್ಲಾ ಯೂನಿಟ್ ಗೂ ನಿಗದಿತ ದರದಂತೆ ಬಿಲ್ ಪಾವತಿಸಬೇಕಿದೆ.
ಹೀಗಾಗಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದ ಶೇಕಡ 20ಕ್ಕೂ ಅಧಿಕ ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ನೀಡಿದೆ. ಗೃಹಜೋತಿ ಸರಾಸರಿ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಎಲ್ಲಾ ಯೂನಿಟ್ ಗೂ ಬಿಲ್ ಕಟ್ಟಬೇಕಿದೆ. ಕಡಿಮೆ ವಿದ್ಯುತ್ ಬಳಸಿದರೆ ಗೃಹಜ್ಯೋತಿ ಸೌಲಭ್ಯ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.