ನಟ ಹಾಗೂ ಫಿಟ್ನೆಸ್ ಐಕಾನ್ ಜಾನ್ ಅಬ್ರಹಾಂ ಪಕ್ಕಾ ಶಾಖಾಹಾರಿ. ತಮ್ಮ ದಿನನಿತ್ಯದ ಪ್ರೋಟೀನ್ ಅಗತ್ಯತೆಗೆ ಡೈರಿ ಉತ್ಪನ್ನಗಳನ್ನು ಅವಲಂಬಿಸುವ ಜಾನ್ ಅಬ್ರಹಾಂ ಹಾಲು ಮತ್ತು ಮೊಸರುಗಳೊಂದಿಗೆ, ಸಸ್ಯಜನಿತ ಉತ್ಪನ್ನಗಳಾದ ಮೊಳಕೆ ಕಾಳುಗಳು, ಬೇಳೆಕಾಳುಗಳು ಮತ್ತು ಸೋಯಾ ಮೇಲೆ ಅವಲಂಬಿತರಾಗಿದ್ದಾರೆ.
ಸೂಕ್ತ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಪಡೆಯಲು ಗೋಧಿ, ಆಲೂಗಡ್ಡೆ, ಬಾಜ್ರಾ ಮತ್ತು ಜೋಳದ ಮೇಲೆ ಅವಲಂಬಿತರಾದ ಜಾನ್ ಅಬ್ರಹಾಂ, ತರಕಾರಿಗಳು, ಸಲಾಡ್‌ಗಳು ಹಾಗೂ ಸೇಬು ಮತ್ತು ಕಿತ್ತಳೆಯಂಥ ಹಣ್ಣುಗಳನ್ನು ನಂಬಿಕೊಂಡಿದ್ದಾರೆ.
ಗುಡ್ ನ್ಯೂಸ್: ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ನೇಮಕಾತಿ
ಗ್ರೀನ್ ಟೀ/ಬ್ಲಾಕ್ ಕಾಫಿಯೊಂದಿಗೆ ತಮ್ಮ ದಿನ ಆರಂಭಿಸುವ ಜಾನ್, ಮೊಟ್ಟೆಯ ಬಿಳಿ ಭಾಗ, ಬಾದಾಮಿ, ಟೋಸ್ಟ್, ಒಂದು ಗ್ಲಾಸ್ ಜ್ಯೂಸ್‌ನೊಂದಿಗೆ ದಿನ ಆರಂಭಿಸುತ್ತಾರೆ. ಮಧ್ಯಾಹ್ನದ ಭೋಜನಕ್ಕೆ ಮನೆಯಲ್ಲಿ ತಯಾರಿಸಿದ ಪಾಲಕ್ ಮತ್ತು ರೊಟ್ಟಿಯಂಥ ಸರಳ ಆಹಾರ ಸೇವನೆ ಮಾಡುತ್ತಾರೆ. ರಾತ್ರಿಯ ಭೋಜನಕ್ಕೆ ಸೂಪ್, ಸಲಾಡ್ ಮತ್ತು ಬೇಯಿಸಿದ ತರಕಾರಿಗಳು ಜಾನ್ ಅಬ್ರಹಾಂರ ಪಥ್ಯವಾಗಿವೆ.
ಬೆಳಿಗ್ಗೆ ಬೇಗ ಎದ್ದು ನಿರಂತರವಾಗಿ ವ್ಯಾಯಾಮ ಮಾಡುವುದರಿಂದ ತಾವು ಅಷ್ಟು ಫಿಟ್ ಆಗಿರುವುದಾಗಿ ಹೇಳುವ ಅಬ್ರಹಾಂ ಕೋರ್ ವ್ಯಾಯಾಮ, ಕ್ರಾಸ್-ಫಿಟ್, ಫಂಕ್ಷನಲ್ ಮತ್ತು ಸ್ಟ್ರೆಂಗ್ತ್ ವ್ಯಾಯಾಮಗಳ ಮೇಲೆ ಹೆಚ್ಚಾಗಿ ಗಮನ ಹರಿಸುತ್ತಾರೆ.
ಕ್ರೀಡೆಯಲ್ಲೂ ಆಸಕ್ತಿ ಹೊಂದಿರುವ ಜಾನ್, ಯೋಗ ಮತ್ತು ಧ್ಯಾನವನ್ನೂ ಅಳವಡಿಸಿಕೊಂಡಿದ್ದು, ಇವುಗಳಿಂದ ಸ್ವಯಂ ನಿಯಂತ್ರಣ ಮತ್ತು ಶಿಸ್ತು ಮೈಗೂಡಿರುವುದಾಗಿ ತಿಳಿಸುತ್ತಾರೆ.