ಗಣತಂತ್ರೋತ್ಸವದ ದಿನದಂದು ಹೈದರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣದಿಂದ ಕೃಷ್ಣಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಆಸ್ಪತ್ರೆ, ಸಿಕಂದರಾಬಾದ್‌ಗೆ ಮತ್ತು ಯಶೋಧಾ ಆಸ್ಪತ್ರೆ ಮಲಕ್‌ಪೇಟ್ ಶಾಖೆಯಿಂದ (ಶ್ವಾಸಕೋಶ) ಸಿಕಂದರಾಬಾದ್‌ನ ಶಾಖೆಗೆ ಅಂಗಾಂಗಗಳನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ಗೆ ತಡೆರಹಿತ ಮಾರ್ಗವನ್ನು ಒದಗಿಸುವ ಮೂಲಕ ಸಜೀವ ಅಂಗಗಳನ್ನು (ಹೃದಯ) ಸಾಗಿಸಲು ಅನುಕೂಲ ಮಾಡಿಕೊಡಲಾಗಿದೆ.
ಇಡೀ ದೇಶ ಗಣತಂತ್ರೋತ್ಸವದ ಸಂಭ್ರಮಾಚರಣೆಯಲ್ಲಿದ್ದಾಗ, ಹೈದರಾಬಾದ್‌ನ ಸಂಚಾರಿ ಪೊಲೀಸರು ಬೇಗಂಪೇಟ್ ವಿಮಾನ ನಿಲ್ದಾಣದಿಂದ ಕಿಮ್ಸ್ ಆಸ್ಪತ್ರೆಗೆ ಹೃದಯವನ್ನು ಸಾಗಿಸಲು ಹಸಿರು ಕಾರಿಡಾರ್ ವ್ಯವಸ್ಥೆ ಮಾಡುವಲ್ಲಿ ನಿರತರಾಗಿದ್ದರು.
ಜೀವಂತ ಅಂಗವನ್ನು ಹೊತ್ತ ವೈದ್ಯಕೀಯ ತಂಡವು ಬೆಳಿಗ್ಗೆ 9.28 ಕ್ಕೆ ಹೊರಟು 9.32 ಕ್ಕೆ ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ತಲುಪಿತು. ಬೇಗಂಪೇಟೆ ವಿಮಾನ ನಿಲ್ದಾಣದಿಂದ ಕಿಮ್ಸ್ ಆಸ್ಪತ್ರೆಗೆ 3 ಕಿ.ಮೀ. ಅಂತರವಿದ್ದು, ಅದನ್ನು 4 ನಿಮಿಷದಲ್ಲಿ ಕ್ರಮಿಸಲಾಗಿದೆ.
ಮಧ್ಯಾಹ್ನ 1.27ಕ್ಕೆ ಯಶೋಧಾ ಆಸ್ಪತ್ರೆ, ಮಲಕ್‌ಪೇಟ್‌ನಿಂದ ಸಿಕಂದರಾಬಾದ್‌ನ ಯಶೋಧಾ ಆಸ್ಪತ್ರೆಗೆ ಶ್ವಾಸಕೋಶವನ್ನು ಸಾಗಿಸಲು ಮತ್ತೊಂದು ಹಸಿರು ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು.
ಶ್ವಾಸಕೋಶಗಳನ್ನು ಹೊತ್ತ ವೈದ್ಯಕೀಯ ತಂಡವು ಮಧ್ಯಾಹ್ನ 1.27 ಕ್ಕೆ ಯಶೋಧಾ ಆಸ್ಪತ್ರೆ, ಮಲಕ್‌ಪೇಟೆಯಿಂದ ಹೊರಟು 1.39 ಕ್ಕೆ ಸಿಕಂದರಾಬಾದ್‌ನ ಯಶೋಧಾ ಆಸ್ಪತ್ರೆ ತಲುಪಿತು. ಯಶೋಧಾ ಆಸ್ಪತ್ರೆ, ಮಲಕ್‌ಪೇಟ್‌ನಿಂದ ಯಶೋಧಾ ಆಸ್ಪತ್ರೆ ಸಿಕಂದರಾಬಾದ್ ನಡುವಿನ ಅಂತರವು 12 ಕಿಮೀ, ಇದನ್ನು 12 ನಿಮಿಷಗಳಲ್ಲಿ ಕ್ರಮಿಸಲಾಗಿದೆ.
ಸಜೀವ ಅಂಗಗಳ ಸಾಗಣೆಗೆ ನೆರವಾಗಲು ಅಪ್ರತಿಮ ಸಮಯಪ್ರಜ್ಞೆ ಮೆರೆದ ಹೈದರಾಬಾದ್ ಟ್ರಾಫಿಕ್ ಪೊಲೀಸರ ಪ್ರಯತ್ನವನ್ನು ಆಸ್ಪತ್ರೆಯ ಆಡಳಿತವು ಶ್ಲಾಘಿಸಿದ್ದು, ಇಂಥ ಸಹಾಯದಿಂದ ಅಮೂಲ್ಯ ಜೀವಗಳನ್ನು ಉಳಿಯುತ್ತವೆ ಎಂದಿದೆ. 2022 ರಲ್ಲಿ, ಹೈದರಾಬಾದ್ ಟ್ರಾಫಿಕ್ ಪೊಲೀಸರು ನಾಲ್ಕು ಬಾರಿ ಅಂಗಗಳ ಸಾಗಣೆಗೆ ಇದೇ ರೀತಿ ನೆರವಾಗಿದ್ದಾರೆ.