ತೆಂಗಿನ ಕಾಯಿ ಬಳಕೆಯಿಂದ ಅಡುಗೆಯ ರುಚಿ ಹೆಚ್ಚುತ್ತದೆ ಎಂಬುದೇನೋ ನಿಜ. ಆದರೆ ಅದರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ.
ಬೇಸಿಗೆಯ ಬೇಗೆ ತಂಪನ್ನೀಯುವ ಶಕ್ತಿ ತೆಂಗಿನಕಾಯಿಗಿದೆ. ಇದರ ಹಾಲನ್ನು ಹಿಂಡಿ ತೆಗೆದು ಬೆಲ್ಲ ಸೇರಿಸಿ ಕುಡಿಯುವುದರಿಂದ ಉಷ್ಣ ಸಂಬಂಧಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದು ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಪ್ಪಿಸುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನಿತ್ಯ ತೆಂಗಿನಕಾಯಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದು ಬಹಳ ಮುಖ್ಯ. ಹಸಿ ಅಥವಾ ಒಣಗಿದ ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಮಿನರಲ್ ಗಳು ಇರುತ್ತವೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲೂ ಇದು ಸಹಕಾರಿ. ಮಕ್ಕಳಿಗೆ ಇದರ ಹಾಲನ್ನು ಕುಡಿಯಲು ಕೊಡುವುದರಿಂದ ಮೂಳೆ ಬಲಿಷ್ಠವಾಗುತ್ತದೆ. ಮಲಬದ್ಧತೆ ನಿವಾರಣೆಗೂ ಇದು ಹೇಳಿ ಮಾಡಿಸಿದ ಪಾನೀಯ.