ಉತ್ತರಾಖಂಡ ಸರ್ಕಾರವು ಹೊರ ರಾಜ್ಯದ ವಾಹನಗಳ ಮೇಲೆ ಶೀಘ್ರದಲ್ಲೇ ಹಸಿರು ಸೆಸ್ ವಿಧಿಸಲಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಈ ಮೊತ್ತವು 20 ರಿಂದ 80 ರೂ.ವರೆಗೆ ಇರುತ್ತದೆ. ವಾಣಿಜ್ಯ ಮತ್ತು ಖಾಸಗಿ ವಾಹನಗಳಿಗೆ ಸಮಾನವಾಗಿ ಅನ್ವಯಿಸುತ್ತದೆ. ದ್ವಿಚಕ್ರ ವಾಹನಗಳು, ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ವಾಹನಗಳು, ಉತ್ತರಾಖಂಡ್‌ನಲ್ಲಿ ನೋಂದಾಯಿಸಲ್ಪಟ್ಟವರು ಮತ್ತು ಆಂಬ್ಯುಲೆನ್ಸ್ ಗಳು ಮತ್ತು ಅಗ್ನಿಶಾಮಕ ದಳಗಳಂತಹ ಅಗತ್ಯ ಸೇವೆಗಳಲ್ಲಿ ತೊಡಗಿರುವವರಿಗೆ ವಿನಾಯಿತಿ ನೀಡಲಾಗುತ್ತದೆ.
ಸೆಸ್ ವಿಧಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವುದು ನಮ್ಮ ಗುರಿಯಾಗಿದೆ. ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳು ಉತ್ತರಾಖಂಡದ ಹೊರಗೆ ನೋಂದಾಯಿಸಲಾದ ವಾಹನಗಳನ್ನು ಗುರುತಿಸುತ್ತದೆ ಮತ್ತು ವಾಹನ ಮಾಲೀಕರ ಫಾಸ್ಟ್‌ಟ್ಯಾಗ್ ವ್ಯಾಲೆಟ್‌ನಿಂದ ನೇರವಾಗಿ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಎಂದು ಜಂಟಿ ಆಯುಕ್ತ (ಸಾರಿಗೆ) ಸನತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ತ್ರಿಚಕ್ರ ವಾಹನಗಳಿಗೆ 20, ನಾಲ್ಕು ಚಕ್ರದ ವಾಹನಗಳಿಗೆ 40, ಮಧ್ಯಮ ವಾಹನಗಳಿಗೆ 60 ಮತ್ತು ಭಾರಿ ವಾಹನಗಳಿಗೆ 80 ರೂಪಾಯಿ ಶುಲ್ಕ ವಿಧಿಸಲಾಗುವುದು ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.