alex Certify ಹಲವು ಆರೋಗ್ಯ ಪ್ರಯೋಜನ ನೀಡುತ್ತೆ ಹಸಿರು ಸೇಬು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲವು ಆರೋಗ್ಯ ಪ್ರಯೋಜನ ನೀಡುತ್ತೆ ಹಸಿರು ಸೇಬು

ಹೆಚ್ಚಾಗಿ ಎಲ್ಲರಿಗೂ ಸೇಬು ಎಂದ ತಕ್ಷಣ ಕೆಂಪು ಸೇಬು ನೆನಪಾಗುತ್ತದೆ. ಆದರೆ ಕೆಂಪು ಸೇಬಿನಂತೆ ಹಸಿರು ಸೇಬು ಕೂಡ ಆರೋಗ್ಯಕ್ಕೆ ಉತ್ತಮ. ಹಸಿರು ಸೇಬವನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.

* ಹಸಿರು ಸೇಬು ಹಣ್ಣಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ತಾಮ್ರ, ಕಬ್ಬಿಣ, ಸತು, ಮತ್ತು ಮೆಗ್ನಿಶಿಯಂ ಮುಂತಾದ ಅಂಶಗಳಿವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಮೂಳೆಗಳು ಗಟ್ಟಿಯಾಗುತ್ತವೆ.

* ಇದನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ಮನಸ್ಸು ಮತ್ತು ಚರ್ಮದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಮೆದುಳನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ.

* ಈ ಸೇಬನ್ನು ಪ್ರತಿದಿನ ಸೇವಿಸಿದರೆ ತೂಕ ಇಳಿಸಿಕೊಳ್ಳಬಹುದು. ಇದು ಬೊಜ್ಜನ್ನು ಕರಗಿಸುತ್ತದೆ. ಇದರಿಂದ ಕೊಬ್ಬಿನ ಅಂಗಾಂಶವು ತೂಕವನ್ನು ನಿಯಂತ್ರಿಸುತ್ತದೆ.

* ಹಸಿರು ಸೇಬು ಹಲ್ಲುಗಳನ್ನು ಆರೋಗ್ಯವಾಗಿಡುತ್ತದೆ. ಇದರ ಸೇವನೆಯಿಂದ ಬಾಯಲ್ಲಿ ಸಾಕಷ್ಟು ಲಾಲಾರಸ ಉತ್ಪತ್ತಿಯಾಗುತ್ತದೆ. ಅದು ಹಲ್ಲುಗಳನ್ನು ಸಹ ಬಲಪಡಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...