ಗ್ರೇಟರ್ ನೋಯ್ಡಾ: ಅಲ್ಟ್ರಾಸೌಂಡ್ ಮಾಡಿಸಲು ಹೋಗಿದ್ದ ಗರ್ಭಿಣಿಗೆ ವೈದ್ಯ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ದಾದ್ರಿ ಪ್ರದೇಶದ ವಿದ್ಯಾ ಆಲ್ಟ್ರಾಸೌಂಡ್ ಕೇಂದ್ರದಲ್ಲಿ ಬುಧವಾರ ಮಧ್ಯಾಹ್ನ ಘಟನೆ ನಡೆದಿದೆ. ರಾಜ್ ಬೀರ್ ನಗರ್ ಎಂದು ಗುರುತಿಸಲಾಗಿರುವ ವೈದ್ಯ ಗರ್ಭಿಣಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ.
26 ವರ್ಷದ ಗರ್ಭಿಣಿ ಆಲ್ಟ್ರಾಸೌಂಡ್ ಕೇಂದ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಮದ್ಯ ಸೇವನೆ ಮಾಡಿದ್ದ ವೈದ್ಯ ಅನುಚಿತವಾಗಿ ವರ್ತಿಸಿದ್ದಾನೆ ದೂರು ನೀಡಲಾಗಿದೆ. ಗ್ರೇಟರ್ ನೋಯಿಡಾ ಎಸಿಪಿ 2 ನಿತಿನ್ ಸಿಂಗ್ ಅವರು ನೀಡಿರುವ ಮಾಹಿತಿಯ ಪ್ರಕಾರ, ವೈದ್ಯ ಅನುಚಿತ ವರ್ತನೆ ತೋರಿದ ಬಗ್ಗೆ ಮಹಿಳೆ ದೂರು ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರಶ್ನಿಸಿದ ಮಹಿಳೆಯ ಸೋದರ ಸಂಬಂಧಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇನ್ನು ವೈದ್ಯನ ವಿರುದ್ಧ ನೀಡಿರುವ ದೂರನ್ನು ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ.