
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಆರ್.ಅಶೋಕ್, ಗ್ರೇಟರ್ ಬೆಂಗಳೂರು ವಿಧೇಯಕ ಬೆಂಗಳೂರು ಪಾಲಿಗೆ ಮರಣ ಶಾಸನ. 74ನೇ ತಿದ್ದುಪಡಿ ಬಗ್ಗೆ ನೀವು ಅಪಪ್ರಚಾರ ಮಾಡುತ್ತಿದ್ದೀರಿ. ಮುಖ್ಯಮಂತ್ರಿಗಳನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸ್ಥಳೀಯ ನಾಯಕತ್ವದ ಮೇಲೆ ಹೇರಿಕೆ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.
ಯಾವುದೇ ಕಾರನಕ್ಕೂ ಬಿಬಿಎಂಪಿ ವಿಭಜನೆಯಾಗಬಾರದು. ಬೆಂಗಳೂರು ಒಟ್ಟಾಗಿರಲಿ ಎಂದು ನಾಲ್ಕು ಗೋಪುರಗಳನ್ನು ನಿರ್ಮಿಸಿದ್ದರು. ಆದರೆ ಈಗ ಕೆಂಪೇಗೌಡರ ಪರಿಕಲ್ಪನೆಯನ್ನೇ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ನೀಡಿ ಪಾಲಿಕೆ ಅಧಿಕಾರ ತೆಗೆಯಲಾಗಿದೆ. ಬೆಂಗಳೂರಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಎಂದು ಗುಡುಗಿದರು.
ಒಬ್ಬ ಮೇಯರ್ ಇರಲಿ, ಕಮಿಷನರ್ ಡಿವೈಡ್ ಮಾಡಿ ಆಡಳಿತ ಮಾಡಿ. ಬೆಂಗಳೂರು ಒಡೆಯುವ ಕೆಲಸ ಮಡಬಾರದು ಎಂದು ಆಗ್ರಹಿಸಿದರು.