alex Certify ಮಾಲ್ಡೀವ್ಸ್ ಬಳಿಕ ಸಿಡ್ನಿಯಲ್ಲೂ ಕ್ವಾರಂಟೈನ್​ ಮುಗಿಸಿ ಮನೆಗೆ ತೆರಳಿದ ಆಸ್ಟ್ರೇಲಿಯಾ ಕ್ರಿಕೆಟರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್ಡೀವ್ಸ್ ಬಳಿಕ ಸಿಡ್ನಿಯಲ್ಲೂ ಕ್ವಾರಂಟೈನ್​ ಮುಗಿಸಿ ಮನೆಗೆ ತೆರಳಿದ ಆಸ್ಟ್ರೇಲಿಯಾ ಕ್ರಿಕೆಟರ್ಸ್

ಭಾರತದಲ್ಲಿ ಐಪಿಎಲ್​ ರದ್ದಾದ ಬಳಿಕ ತವರಿಗೆ ವಾಪಸ್ಸಾಗಿದ್ದ ಆಸ್ಟ್ರೇಲಿಯನ್​ ಕ್ರಿಕೆಟ್​ ಆಟಗಾರರು ಸಿಡ್ನಿಯಲ್ಲಿ ಕ್ವಾರಂಟೈನ್​ ಆಗಿದ್ದರು. 14 ದಿನಗಳ ಬಳಿಕ ಅಂದರೆ ಭಾನುವಾರ ಐಸೋಲೇಷನ್​ನಿಂದ ಹೊರಬಂದ ಸ್ಟೀವನ್ ಸ್ಮಿತ್​, ಡೇವಿಡ್​ ವಾರ್ನರ್​ ಹಾಗೂ ಕ್ಯುಮಿನ್ಸ್​ ಸೇರಿದಂತೆ ವಿವಿಧ ಆಟಗಾರರು, ಕೋಚ್​​ಗಳು ಹಾಗೂ ಇತರೆ ಸಿಬ್ಬಂದಿ ಇದೀಗ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಮಗಳ ಜೊತೆ ಮೋಜು ಮಾಡುತ್ತಿರುವ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ವಾರ್ನರ್​​ ಮನೆಯಲ್ಲಿ ಇರೋದಕ್ಕೆ ಖುಷಿ ಎನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.‌

ವೇಗಿ ಜಾಸೋನ್​ ಬೆಹ್ರೆನ್​ಡೋರ್ಫ್​ ಕೂಡ ಕ್ವಾರಂಟೈನ್​ ಅವಧಿ ಮುಗಿಸಿ ಮಾತನಾಡಿದ್ದು, ಶುದ್ಧವಾದ ಗಾಳಿಯನ್ನ ಉಸಿರಾಡುತ್ತಿರೋ ನನಗೆ ಖುಷಿ ಎನಿಸುತ್ತಿದೆ ಎಂದು ಹೇಳಿದ್ದರು.

ಹೀಗೆ ಎಲ್ಲೆಲ್ಲೋ ಸಿಲುಕಿಹಾಕಿಕೊಳ್ಳೋದು ಯಾವಾಗಲೂ ಒಂದು ಕಠಿಣವಾದ ಕೆಲಸವೇ ಸರಿ. ಆದರೆ ಕ್ವಾರಂಟೈನ್​ ಅವಧಿಯನ್ನ ಯಶಸ್ವಿಯಾಗಿ ಮುಗಿಸಿರುವ ನಾವು ಮನೆಗೆ ಹೋಗಲು ಸಮರ್ಥರಾಗಿದ್ದೇವೆ ಅನ್ನೋದೇ ಒಂದು ಸಮಾಧಾನಕರ ವಿಚಾರವಾಗಿದೆ. ಯಾವಾಗ ಮನೆಗೆ ಹೋಗುತ್ತೇನೋ, ನನ್ನ ಕುಟುಂಬವನ್ನ ಸೇರುತ್ತೇನೋ ಎಂದೆನಿಸುತ್ತಿದೆ ಎಂದು ಜಾಸೋನ್​ ಹೇಳಿದ್ದಾರೆ.

ಭಾರತದಿಂದ ಆಸ್ಟ್ರೇಲಿಯಾಗೆ ವಿಮಾನಯಾನವನ್ನ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧಿಸಿದ ಬಳಿಕ ಆಸ್ಟ್ರೇಲಿಯನ್ ಆಟಗಾರರು 10 ದಿನಗಳ ಕಾಲ ಮಾಲ್ಡೀವ್ಸ್​ನಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದಾದ ಬಳಿಕ ಮೇ 17ರಂದು ಆಸ್ಟ್ರೇಲಿಯಾ ಆಟಗಾರರು ಮಾಲ್ಡೀವ್ಸ್​ನಿಂದ ಸಿಡ್ನಿಗೆ ಬಂದಿಳಿದಿದ್ದರು.

ಸಿಡ್ನಿಯಲ್ಲಿ ಮತ್ತೆ 14 ದಿನ ಹೋಟೆಲ್​ ರೂಮ್​ಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಆಸ್ಟ್ರೇಲಿಯಾ ಆಟಗಾರರು ಮತ್ತೊಂದು ಬಾರಿಗೆ ಕ್ವಾರಂಟೈನ್​ ಮುಗಿಸಿ ತಮ್ಮ ನಿವಾಸಕ್ಕೆ ವಾಪಸ್​ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...