ಸೆಕ್ಸ್, ದಾಂಪತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ನಂಬಲಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸೆಕ್ಸ್ ವಿಷ್ಯದಲ್ಲೂ ಸಾಕಷ್ಟು ಬದಲಾವಣೆ ಕಂಡು ಬರ್ತಿದೆ. ಅಮೆರಿಕಾ ಜನರ ಸಂಭೋಗದ ಆಸಕ್ತಿ ಕಡಿಮೆಯಾಗ್ತಿದೆಯಂತೆ. 2011 ಮತ್ತು 2019 ರ ನಡುವೆ ಅಮೆರಿಕನ್ ಯುವಕರ ಲೈಂಗಿಕ ಅಭ್ಯಾಸಗಳನ್ನು ಹೋಲಿಸುವ, ನ್ಯಾಷನಲ್ ಸರ್ವೆ ಆಫ್ ಫ್ಯಾಮಿಲಿ ಗ್ರೋತ್‌ನ ಡೇಟಾವನ್ನು ಆಧರಿಸಿ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.
ಅಧ್ಯಯನದ ಅಂಕಿ-ಅಂಶಗಳ ಪ್ರಕಾರ, ಅಮೆರಿಕಾದ ಯುವಕರು, ಲೈಂಗಿಕ ಆಸಕ್ತಿ ಕಳೆದುಕೊಳ್ತಿದ್ದಾರೆ. ದೈಹಿಕ ಸಂಬಂಧದಲ್ಲಿ ಆಸಕ್ತಿ ಕಡಿಮೆಯಾಗಿದೆ. ಒಂದು ವರ್ಷದಿಂದ ಲೈಂಗಿಕ ಸಂಬಂಧ ನಡೆಸದ ಜೋಡಿಯೂ ಇದ್ದಾರೆ. ಸಂಗಾತಿ ಜೊತೆ ವಾಸಿಸುವ ಜನರಿಗೆ ಹೋಲಿಕೆ ಮಾಡಿದ್ರೆ ಒಂಟಿಯಾಗಿ ವಾಸಿಸುವ ಹೆಚ್ಚಿನ ಜನರು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಶೇಕಡಾ 5ರಷ್ಟು ವಿವಾಹಿತರು, ವರ್ಷಗಳಿಂದ ಶಾರೀರಿಕ ಸಂಬಂಧ ಬೆಳೆಸಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
2011ರಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ವಾಸಿಸುವ ಜನರ ಸಂಖ್ಯೆ ಶೇಕಡಾ 40ರಿಂದ ಶೇಕಡಾ 32ಕ್ಕೆ ಇಳಿದಿದೆ. ಸಾಮಾನ್ಯವಾಗಿ ವಿವಾಹಿತರು ಶಾರೀರಿಕ ಸಂಬಂಧ ಬೆಳೆಸುವುದ್ರಲ್ಲಿ ಆಸಕ್ತಿ ಹೊಂದಿರುತ್ತಾರೆಂದು ನಂಬಲಾಗಿದೆ. ಆದ್ರೆ ತಡವಾಗಿ ಮದುವೆಯಾಗ್ತಿರುವ ಕಾರಣ ಜನರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ. ನಾಲ್ಕು ಮಹಿಳೆಯರಲ್ಲಿ ಇಬ್ಬರು ಮಹಿಳೆಯರು ಎರಡು ವರ್ಷಗಳಿಂದ ಶಾರೀರಿಕ ಸಂಬಂಧ ಬೆಳೆಸಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. 25 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಆಸಕ್ತಿ ಗಣನೀಯವಾಗಿ ಇಳಿದಿದೆ. 20ರಲ್ಲಿ ಒಬ್ಬ ಮಹಿಳೆ, 10 ವರ್ಷದಿಂದ ಸಂಬಂಧ ಬೆಳೆಸಿಲ್ಲವೆಂದು ಅಧ್ಯಯನದಲ್ಲಿ ಹೇಳಲಾಗಿದೆ.
ಅಮೆರಿಕಾದಲ್ಲಿ ಆಗ್ತಿರುವ ಈ ಬೆಳವಣಿಗೆಗೆ ಕಾರಣವೇನು ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ. ಮದುವೆ ಅಥವಾ ಇತರ ಸಾಮಾಜಿಕ ಪದ್ಧತಿಗಳಿಂದ ದೂರವಿರುವುದು, ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆ, ಅತಿಯಾದ ಕುಡಿತ, ವಿಡಿಯೋ ಗೇಮ್ ಚಟ, ಪೋರ್ನೊಗ್ರಫಿ ಇವೆಲ್ಲವೂ ಇದಕ್ಕೆ ಕಾರಣ ಎನ್ನಲಾಗ್ತಿದೆ. ಇದ್ರ ಮಧ್ಯೆ ಕೊರೊನಾ ಮತ್ತೊಂದು ಕಾರಣವಾಗಿದೆ. ಸದಾ ಮನೆಯಲ್ಲಿರುವ ಜನರು, ಸಂಬಂಧದಿಂದ ದೂರವಾಗ್ತಿದ್ದಾರೆ.