ಬೆಂಗಳೂರು : ಹೊಸ BPL-APL ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಸುಮಾರು 20 ಸಾವಿರ ಪಡಿತರ ಅರ್ಜಿಗಳನ್ನು ಆಹಾರ ಇಲಾಖೆ ವಿಲೇವಾರಿ ಮಾಡಿದೆ.
ಪಡಿತರ ಅರ್ಜಿ ವಿಲೇವಾರಿಯನ್ನು ಆಹಾರ ಇಲಾಖೆಗಳು ಶುರು ಮಾಡಿದ್ದು, ಸುಮಾರು 3 ಲಕ್ಷ ಅರ್ಜಿ ವಿಲೇವಾರಿ ಕಾರ್ಯ ಆರಂಭಗೊಂಡಿದೆ.20 ಸಾವಿರ ಪಡಿತರ ಅರ್ಜಿಗಳನ್ನು ಆಹಾರ ಇಲಾಖೆ ವಿಲೇವಾರಿ ಮಾಡಿದೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ಮೇಲೆ ಬಿಪಿಎಲ್ ಕಾರ್ಡ್ ಗೆ ಭರ್ಜರಿ ಡಿಮ್ಯಾಂಡ್ ಬಂದಿದ್ದು, ಭಾರಿ ಅರ್ಜಿ ಸಲ್ಲಿಕೆಯಾಗಿದೆ. ಇನ್ನೂ ಹೆಚ್ಚಿನ ಜನರು ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಕಾದು ಕುಳಿತಿದ್ದು, ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ. ಶೀಘ್ರವೇ ಹೊಸ APL, BPL ಕಾರ್ಡ್ ವಿತರಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆಗಳ ಸಚಿವ ಕೆ.ಹೆಚ್ ಮುನಿಯಪ್ಪ ಕೂಡ ಇತ್ತೀಚೆಗೆ ಹೇಳಿಕೆ ನೀಡಿದ್ದರು.