alex Certify ಹೃದಯ ರೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಶೇ.50 ರಷ್ಟು ತಗ್ಗಿಸುತ್ತೆ ಈ ಇಂಜೆಕ್ಷನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯ ರೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಶೇ.50 ರಷ್ಟು ತಗ್ಗಿಸುತ್ತೆ ಈ ಇಂಜೆಕ್ಷನ್…!

ಹೃದಯಾಘಾತ, ಪಾರ್ಶ್ವವಾಯು ಮತ್ತು ಕೆಟ್ಟ ಕೊಲೆಸ್ಟ್ರಾಲ್‌ ಈ ಮೂರೂ ಸಮಸ್ಯೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಇವುಗಳಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಕೋವಿಡ್‌, ಕೆಟ್ಟ ಆಹಾರ ಪದ್ಧತಿ, ತಪ್ಪಾದ ಜೀವನಶೈಲಿ ಇವೆಲ್ಲವೂ ಇದಕ್ಕೆ ಕಾರಣವಾಗುತ್ತಿವೆ. ಇದೀಗ ಈ ಸಮಸ್ಯೆಗಳಿಂದ ಮುಕ್ತಿ ನೀಡಬಲ್ಲ ಖುಷಿ ಸುದ್ದಿಯೊಂದು ವಿಜ್ಞಾನ ಲೋಕದಿಂದ ಹೊರಬಿದ್ದಿದೆ.

ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಇಂಜೆಕ್ಷನ್ ಭಾರತೀಯ ಮಾರುಕಟ್ಟೆಗೆ ಕೆಲವೇ ವಾರಗಳಲ್ಲಿ ಬಿಡುಗಡೆಯಾಗಲಿದೆ. ಈ ಚುಚ್ಚುಮದ್ದಿನ ಹೆಸರು ‘ಇಂಕ್ಲಿಸಿರಾನ್’. ಇದನ್ನು ಕಳೆದ 2 ವರ್ಷಗಳಿಂದ ವಿದೇಶಗಳಲ್ಲಿ ಬಳಸಲಾಗುತ್ತಿದೆ ಈ ಇಂಜೆಕ್ಷನ್‌ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಶೇ.50 ರಷ್ಟು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವು ಕಡಿಮೆಯಾಗುತ್ತದೆ.

ಎರಡು ವರ್ಷಗಳ ಹಿಂದೆ ಲಂಡನ್ ಮತ್ತು ಅಮೆರಿಕದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಈ ಇಂಜೆಕ್ಷನ್‌ಗೆ ಅನುಮೋದನೆ ಸಿಕ್ಕಿತ್ತು. ಇನ್ನು ಕೆಲವೇ ದಿನಗಳಲ್ಲಿ ಈ ಇಂಜೆಕ್ಷನ್‌ ಭಾರತದಲ್ಲೂ ಲಭ್ಯವಾಗಲಿದೆ. ಈ ಚುಚ್ಚುಮದ್ದಿನ ಎರಡು ಡೋಸ್‌ ಬೆಲೆ ಅಮೆರಿಕದಲ್ಲಿ 5 ಲಕ್ಷ ರೂಪಾಯಿ. ಭಾರತದಲ್ಲಿ ಇದರ ಬೆಲೆ 1.25 ಲಕ್ಷದಿಂದ 1.5 ಲಕ್ಷದವರೆಗೂ ಇರಲಿದೆ.

ಈ ಚುಚ್ಚುಮದ್ದನ್ನು ಪಶ್ಚಿಮದ ಕೆಇಎಂ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿದೆ. ಶೇ.50ರಷ್ಟು ಅಧಿಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಇದು ನೆರವಾಗುತ್ತದೆ ಎಂಬುದು ದೃಢಪಟ್ಟಿದೆ. ಈ ಇಂಜೆಕ್ಷನ್ ಸ್ವಲ್ಪ ಮಟ್ಟಿಗೆ ಹೃದಯಾಘಾತವನ್ನೂ ನಿಯಂತ್ರಿಸುತ್ತದೆ. ಈವರೆಗೆ ಪ್ರಪಂಚದ ವಿವಿಧ ದೇಶಗಳಲ್ಲಿ ಇದನ್ನು ಪ್ರಯೋಗಿಸಲಾಗಿದೆ.

ಇಂಕ್ಲಿಸಿರಾನ್ ಹೃದಯಾಘಾತ ಮತ್ತು ಪಾರ್ಶ್ವವಾಯುಗಳನ್ನು 55 ಪ್ರತಿಶತದಷ್ಟು ತಡೆಯಬಲ್ಲದು ಎಂದು ಅಂದಾಜಿಸಲಾಗಿದೆ. ಅಂದಾಜಿನ ಪ್ರಕಾರ ಇದು ಮುಂದಿನ 10 ವರ್ಷಗಳಲ್ಲಿ ಇಂಗ್ಲೆಂಡ್‌ನಲ್ಲಿ 30,000 ಜನರ ಜೀವವನ್ನು ಉಳಿಸಲಿದೆಯಂತೆ.

ರಕ್ತದಿಂದ ಹಾನಿಕಾರಕ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಯಕೃತ್ತಿನ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.ಇಂಕ್ಲಿಸಿರಾನ್‌ನ ಅನುಮೋದನೆ ಹೃದಯ ರೋಗಿಗಳಿಗೆ ನಿಜಕ್ಕೂ ಶುಭ ಸುದ್ದಿ. ಇದರಿಂದ ಜನರ ಪ್ರಾಣ ಉಳಿಸಬಹುದು.

ಚರ್ಮದ ಅಡಿಯಲ್ಲಿ ಸರಳವಾಗಿ ನೀಡಬಲ್ಲ ಇಂಜೆಕ್ಷನ್‌ ಇದು. ವರ್ಷಕ್ಕೆ ಎರಡು ಬಾರಿ ಮಾತ್ರ ನೀಡಲಾಗುತ್ತದೆ. ಇದರ ಪ್ರಯೋಜನಗಳ ಪೂರ್ಣ ಪ್ರಮಾಣದ ದೃಢೀಕರಣವನ್ನು ಖಚಿತಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆದರೆ ಭವಿಷ್ಯದಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯುವಿನಿಂದ ಜನರನ್ನು ಪಾರು ಮಾಡಲು ಇಂಜೆಕ್ಷನ್‌ ಅನ್ನು ಸರ್ಕಾರ ಮಾರುಕಟ್ಟೆಗೆ ತರುತ್ತಿದೆ.

ಇಂಗ್ಲೆಂಡ್‌ನಲ್ಲಿ ಇದನ್ನು ಶಸ್ತ್ರಚಿಕಿತ್ಸೆಗಳಲ್ಲಿ ಬಳಸಲಾಗುತ್ತಿದೆ. ಮೊದಲ ಡೋಸ್ ನಂತರ, ಔಷಧಿಯನ್ನು ಮೂರು ತಿಂಗಳ ನಂತರ ಮತ್ತೆ ನೀಡಲಾಗುತ್ತದೆ. ನಂತರ ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತದೆ. ಕ್ಲಿನಿಕಲ್ ಪ್ರಯೋಗಗಳು LDL ಕೊಲೆಸ್ಟರಾಲ್ ಎಂದು ಕರೆಯಲ್ಪಡುವ ಒಂದು ರೀತಿಯ ಕೊಬ್ಬಿನ ಪದಾರ್ಥದ ಮಟ್ಟವನ್ನು ಈ ಇಂಜೆಕ್ಷನ್‌ ಕಡಿಮೆ ಮಾಡುತ್ತದೆ ಎಂಬುದನ್ನು ಖಚಿತಪಡಿಸಿವೆ.

ಕೊಲೆಸ್ಟ್ರಾಲ್ ರಕ್ತದಲ್ಲಿ ಕಂಡುಬರುವ ಕೊಬ್ಬು. ಅದು ನೈಸರ್ಗಿಕವಾಗಿ ಯಕೃತ್ತಿನಲ್ಲಿ ಉತ್ಪತ್ತಿಯಾಗುತ್ತದೆ. ವಿವಿಧ ರೀತಿಯ ಕೊಲೆಸ್ಟ್ರಾಲ್‌ಗಳಿದ್ದು, ಅವುಗಳಲ್ಲಿ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಕೆಲವು ಅವಶ್ಯಕವಾಗಿದೆ. ಇನ್ನು ಕೆಲವು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಹೆಚ್ಚಿನ ಮಟ್ಟದ ಎಲ್‌ಡಿಎಲ್ ಅಥವಾ ‘ಕೆಟ್ಟ’ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದರಿಂದ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಹೃದಯ ಮತ್ತು ರಕ್ತಪರಿಚಲನಾ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...