ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಬೂದು ಗುಂಬಳದ ಸಾಂಬಾರು ಮಾಡಿರುವುದನ್ನು ನೀವು ಗಮನಿಸಿರಬಹುದು. ಇನ್ನು ಕೆಲವೆಡೆ ಶುಭ ಸಮಾರಂಭಗಳಿಗೆ ಇದನ್ನು ಬಳಸುವುದಿಲ್ಲ. ಇದರ ಸೇವನೆಯಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ…?
ಇದರಲ್ಲಿ ನೀರಿನಂಶ ಸಾಕಷ್ಟಿದ್ದು ಹೊಟ್ಟೆಯಲ್ಲಾದ ಹುಣ್ಣುಗಳನ್ನು ಇದು ನಿವಾರಣೆ ಮಾಡುತ್ತದೆ ಎನ್ನಲಾಗಿದೆ. ಅದರೊಂದಿಗೆ ಕರುಳಿನ ಆರೋಗ್ಯವನ್ನು ಕಾಪಾಡಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.
ದೇಹ ತೂಕ ಕಡಿಮೆ ಮಾಡುವ ಪ್ಲಾನ್ ಹಾಕಿಕೊಂಡವರಿಗೆ ಇದು ಹೇಳಿ ಮಾಡಿಸಿದ ತರಕಾರಿ. ಇದರಲ್ಲಿ ಕಡಿಮೆ ಪ್ರಮಾಣದ ಕ್ಯಾಲೊರಿ ಇರುವುದರಿಂದ ಆಹಾರಗಳಿಗೆ ಪರ್ಯಾಯವಾಗಿ ಇದನ್ನು ಸೇವಿಸಬಹುದು.
ನರಮಂಡಲವನ್ನು ಶಾಂತಗೊಳಿಸಿ ಮೆದುಳನ್ನು ಚುರುಕಾಗಿಸುವ ಶಕ್ತಿಯೂ ಕುಂಬಳಕ್ಕಿದೆ. ಆತಂಕ, ನಿದ್ರಾಹೀನತೆಯಂಥ ಸಮಸ್ಯೆಗಳನ್ನು ದೂರಮಾಡಿ ಮನಸ್ಸನ್ನು ಪ್ರಶಾಂತಗೊಳಿಸುವ ಶಕ್ತಿ ಇದಕ್ಕಿದೆ. ಹಾಗಾಗಿ ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಬೂದುಗುಂಬಳ ಸೇವಿಸಿ ಹಾಗೂ ಮಕ್ಕಳಿಗೂ ತಿನ್ನಲು ಕೊಡಿ.