
ಬೆಂಗಳೂರು: ವಿವಿಧ ತಾಲೂಕು ಪಂಚಾಯಿತಿಗಳ ವ್ಯಾಪ್ತಿಯ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಯವರ ವೇತನ ಮತ್ತು ವೇತನ ವೆಚ್ಚಗಳಿಗೆ ಸಂಬಂಧಿಸಿದ ಪಾವತಿಗಳಿಗಾಗಿ ಅನುದಾನ ಬಿಡುಗಡೆ ಮಾಡಲಾಗಿದೆ.
2024 -25 ನೇ ಆರ್ಥಿಕ ಸಾಲಿಗೆ ತಾಲೂಕು ಪಂಚಾಯಿತಿ ವ್ಯಾಪ್ತಿಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವೇತನ ಪಾವತಿಗೆ ಕೊರತೆಯಾಗಿರುವ ಅನುದಾನವನ್ನು ಪರಿಷ್ಕರಿಸ ವ್ಯತ್ಯಾಸದ ಮೊತ್ತ ಬಿಡುಗಡೆ ಮಾಡಲು ಕೋರಲಾಗಿತ್ತು. ಪ್ರಸ್ತಾವನೆಯಲ್ಲಿ ಸಲ್ಲಿಸಿದಂತೆ ವೇತನ ಪಾವತಿಗೆ ಕೊರತೆಯಾಗಿರುವ ಅನುದಾನ ಪರಿಷ್ಕರಿಸಿದ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. 3208.85 ಲಕ್ಷ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಬಿಡುಗಡೆಗೊಳಿಸಿದ ಅನುದಾನವನ್ನು ನಿಧಿ-2ಗೆ ಜಮಾ ಮಾಡಿಕೊಂಡು ನಂತರ ಸಂಬಂಧಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮರು ಹೊಂದಾಣಿಕೆ ಆದೇಶದಂತೆ ಪ್ರಸ್ತಾವನೆ ಆರ್ಥಿಕ ಇಲಾಖೆಗೆ ಸಲ್ಲಿಸಿ ಖಜಾನೆಯಲ್ಲಿ ಅಪ್ಲೋಡ್ ಮಾಡಿಕೊಳ್ಳುವುದು ಎಂದು ಆರ್ಥಿಕ ಇಲಾಖೆ ತಿಳಿಸಿದೆ.

