alex Certify ನಿವೃತ್ತ ಶಿಕ್ಷಕರಿಗೆ ಗಳಿಕೆ ರಜೆ ನಗದೀಕರಣ : ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತ ಶಿಕ್ಷಕರಿಗೆ ಗಳಿಕೆ ರಜೆ ನಗದೀಕರಣ : ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ

ಬೆಂಗಳೂರು : 2021-22 & 2022-23 ನೇ ಸಾಲಿನಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಶಿಕ್ಷಕ/ಸಿಬ್ಬಂದಿಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣಕ್ಕಾಗಿ ಅನುದಾನದ ಮಾಹಿತಿ ಪಡೆಯುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಶಾಲಾ ಶಿಕ್ಷಣ ಇಲಾಖೆಯಲ್ಲಿ 2019-20 ರಿಂದ 2020-21 ನೇ ಸಾಲಿನವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಒಟ್ಟಾರೆ:2693 ನೌಕರರುಗಳಿಗೆ ಅಗತ್ಯವಾದ ಅನುದಾನ ರೂ.9599.48 ಲಕ್ಷಗಳನ್ನು 2022-23 ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಸಂಬಂಧಿಸಿದ ಶಿಕ್ಷಕರು/ನೌಕರರುಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಈಗಾಗಲೇ ಬಿಡುಗಡೆ ಮಾಡಲಾಗಿರುತ್ತದೆ.

2021-22 ರಿಂದ 2022-23 ನೇ ಸಾಲಿನವರೆಗೆ ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಶಿಕ್ಷಕರು/ಸಿಬ್ಬಂದಿಗಳಿಗೆ 2024-25 ನೇ ಸಾಲಿನಲ್ಲಿ ಅಗತ್ಯವಾದ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಬಿಡುಗಡೆ ಆಗುವ ನಿರೀಕ್ಷೆಯಲ್ಲಿದೆ. ಆರ್ಥಿಕ ಇಲಾಖೆಯಿಂದ ಬಿಡುಗಡೆ ಆದ ಅನುದಾನವನ್ನು ಸಂಬಂಧಿಸಿದ ತಾಲ್ಲೂಕು ಡಿಡಿಓಗಳಿಗೆ ಬಿಡುಗಡೆ ಮಾಡಲು ಹಾಗೂ ಸದರಿ ಡಿಡಿಓಗಳು ಜೇಷ್ಠತೆಯಂತೆ ಕೆ2 ಅಡಿ ದಿ:15.03.2024 ರ ಒಳಗಾಗಿ ಅನುದಾನ ವ್ಯಪಗತವಾಗದಂತೆ ಭರಿಸುವ ಸಲುವಾಗಿ ಉಲ್ಲೇಖಿತ ಪತ್ರದಲ್ಲಿ ಸೂಚಿಸಿರುವಂತೆ ಬಿಡುಗಡೆಗೊಳಿಸಲಾಗುವ ಅನುದಾನಕ್ಕೆ ಸಂಬಂಧಿಸಿದಂತೆ ಡಿಡಿಓಗಳಿಂದ ಮೇಲು ರುಜುಗಾಗಿ ಸಲ್ಲಿಸುವ ಖಜಾನೆ ಬಿಲ್ಲುಗಳಿಗೆ ಗರಿಷ್ಠ 02 ದಿನಗಳೊಳಗೆ ಮೇಲು ರುಜು ಪ್ರಾಧಿಕಾರಿಗಳಾದ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರುಗಳು ಪರಿಶೀಲಿಸಿ ಮೇಲು ರುಜು ಮಾಡುವುದು. ಅನುದಾನ ಸೆಳೆಯುವ ಸಂಬಂಧ ಮೇಲು ರುಜು ಮಾಡಲು ವಿಳಂಬವಾಗದಂತೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಆಯಾ ಡಿಡಿಓಗಳಿಗೆ ಸಕಾಲದಲ್ಲಿ ಬಿಲ್ ಸಲ್ಲಿಸುವಂತೆ ಸೂಚಿಸುವುದು ಒಂದು ವೇಳೆ ಬಿಡುಗಡೆಯಾದ ಅನುದಾನ ವ್ಯಪಗತವಾದಲ್ಲಿ ಸಂಬಂಧಿಸಿದ ಡಿಡಿಓಗಳು ಮತ್ತು ಉಪನಿರ್ದೇಶಕರುಗಳನ್ನು ನೇರ ಹೊಣೆಗಾರರನ್ನಾಗಿ ಮಾಡುವ ಷರತ್ತಿನ ಮೇರೆಗೆ ಅನುದಾನ ಬಿಡುಗಡೆ ಮಾಡಲಾಗುವುದು.

ಈ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು/ಸಿಬ್ಬಂದಿಗಳ ಮಾಹಿತಿಗಳನ್ನು ಲಗತ್ತಿಸಲಾದ ಅನುಬಂಧ-1, ಅನುಬಂಧ-2, & ಅನುಬಂಧ-3 ಗಳಲ್ಲಿರುವಂತೆ ಸಂಬಂಧಿಸಿದ ತಾಲ್ಲೂಕು ಕಛೇರಿಗಳಿಂದ ಪಡೆದು ಕ್ರೋಢಿಕರಿಸಿ ಕ್ರೋಢೀಕೃತ ಮಾಹಿತಿಯನ್ನು ಈ ಕೆಳಗಿನ ವೇಳಾಪಟ್ಟಿಯಂತೆ ಈ ಕಛೇರಿಗೆ ಹಾಜರಾಗಲು ಸಿಬ್ಬಂದಿಯನ್ನು ನಿಯೋಜಿಸುವುದು. ಜಿಲ್ಲಾವಾರು ನಿಗದಿಪಡಿಸಿದ ವೇಳಾಪಟ್ಟಿಯಂತೆ ಆಯಾ ದಿನಾಂಕಗಳಂದು ಸಂಬಂಧಿಸಿದ ಜಿಲ್ಲೆಯ ಮಾಹಿತಿಯನ್ನು ಈ ಕೆಳಕಂಡ ದಾಖಲೆಗಳೊಂದಿಗೆ ಕಡ್ಡಾಯವಾಗಿ ಖುದ್ದು ಹಾಜರಾಗಿ ಸಲ್ಲಿಸಲು ತಿಳಿಸಿದೆ. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ ಎಂಬ ಅಂಶವನ್ನು ಅವಗಾಹನೆಗೆ ತರಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...