ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಅನುದಾನ ಖೋತಾ ಆಗಿದೆ. ಕೋಲಾರದ ರಿಂಗ್ ರಸ್ತೆಗೆ ಮೀಸಲಾಗಿಟ್ಟದ್ದ ಹಣ ವಾಪಸ್ ಪಡೆದುಕೊಂಡಿದೆ.
ಅನುದಾನ ವಾಪಸ್ ಹೋಗಿರುವುದಕ್ಕೆ ಕೇಂದ್ರದವರು ಮಾಹಿತಿ ಇಲ್ಲದೆ ಹಣ ಹಿಂಪಡೆದುಕೊಂಡಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕಿಡಿಕಾರಿದ್ದು, ನಗರಾಭಿವೃದ್ಧಿ ಇಲಾಖೆಗೆ 150 ಕೋಟಿ ರೂಪಾಯಿ ನೀಡಿದ್ದರು. ಇದೀಗ ಯಾವುದೇ ಮಾಹಿತಿ ಇಲ್ಲದೆ ಹಣ ಹಿಂಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಏನ್ ಮಾಡೋದು ರಾಜ್ಯದ ಅನುದಾನದಿಂದಲೇ ರಿಂಗ್ ರಸ್ತೆ ನಿರ್ಮಾಣ ಮಾಡುತ್ತೇವೆ. ರಿಂಗ್ ರಸ್ತೆ ನಿರ್ಮಿಸುತ್ತೇವೆ ಎಂದು ಮಾತು ಕೊಟ್ಟಿದ್ದು, ರಾಜ್ಯದ ಅನುದಾನದಿಂದ ರಿಂಗ್ ರಸ್ತೆ ಮಾಡುತ್ತೇವೆ ಎಂದು ಹೇಳಿದ್ದಾರೆ.