
ಉಡುಪಿ: ಗ್ರ್ಯಾನೈಟ್ ಅನ್ ಲೋಡ್ ಮಾಡುವಾಗ ದುರಂತವೊಂದು ಸಂಭವಿಸಿದೆ. ಬೃಹತ್ ಗಾತ್ರದ ಗ್ರ್ಯಾನೈಟ್ ಅನ್ ಲೋಡ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಬಳಿಯ ತೊಟ್ಟಂ ಪ್ರದೇಶದಲ್ಲಿ ನಡೆದಿದೆ.
ಮೃತರಿಬ್ಬರೂ ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕರಾಗಿದ್ದಾರೆ. ಭಾರಿ ಗಾತ್ರದ ಗ್ರ್ಯಾನೈಟ್ ಅನ್ ಲೋಡ್ ಮಾಡುತ್ತಿದ್ದಾಗ ಕಲ್ಲಿನಡಿ ಸಿಲುಕಿ ಈ ದುರಂತ ಸಂಭವಿಸಿದೆ.
ಸ್ಥಳಕ್ಕೆ ಮಲ್ಪೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.