83 ವರ್ಷದ ತನ್ನ ಅಜ್ಜಿಯೊಂದಿಗೆ ಕೇರಂ ಆಡ್ತಿರುವ ಮೊಮ್ಮಗ ಫೋಟೋ ಹಂಚಿಕೊಂಡಿದ್ದು, ಇಳಿವಯಸ್ಸಲ್ಲೂ ಕ್ರೀಡಾ ಉತ್ಸಾಹ ತೋರುತ್ತಿರುವ ವೃದ್ಧೆಯ ಬಗ್ಗೆ ನೆಟ್ಟಿಗರು ಬೆರಗಾಗಿದ್ದಾರೆ. ಅಕ್ಷಯ್ ಮರಾಠೆ ಎಂಬುವವರು ಟ್ವಿಟರ್‌ನಲ್ಲಿ ಕೇರಂ ಚಾಂಪಿಯನ್ ಆಗಿರುವ ತನ್ನ 83 ವರ್ಷದ ಅಜ್ಜಿಯನ್ನು ಒಳಗೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೈರಲ್ ಪೋಸ್ಟ್ ನ ಶೀರ್ಷಿಕೆ ಪ್ರಕಾರ “ಆಜಿ” ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಅವರ ಅಜ್ಜಿ, ಸಾಧಕರಂತೆ ಕೇರಂ ಆಡುವುದನ್ನು ಕಾಣಬಹುದು.
ಪುಣೆಯ ಆಲ್-ಮಗರಪಟ್ಟಾ ಸಿಟಿ ಕೇರಂ ಪಂದ್ಯಾವಳಿಯಲ್ಲಿ ಅವರ ಆಜಿ ಡಬಲ್ಸ್ ನಲ್ಲಿ ಚಿನ್ನ ಮತ್ತು ಸಿಂಗಲ್ಸ್ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ ಎಂದು ಮರಾಠೆ ಮಾಹಿತಿ ನೀಡಿದ್ದಾರೆ.
“ಪುಣೆಯ ಆಲ್-ಮಗರಪಟ್ಟಾ ಸಿಟಿ ಕೇರಂ ಪಂದ್ಯಾವಳಿಯಲ್ಲಿ ಹೆಚ್ಚು ಕಿರಿಯ ಮತ್ತು ಸ್ಥಿರವಾದ ಕೈಗಳ ವಿರುದ್ಧ ಡಬಲ್ಸ್ ನಲ್ಲಿ ಚಿನ್ನ ಮತ್ತು ಸಿಂಗಲ್ಸ್ ನಲ್ಲಿ ಕಂಚು ಗೆದ್ದ ನನ್ನ 83 ವರ್ಷದ ಆಜಿಯಿಂದ ಸ್ಫೂರ್ತಿ ಪಡೆದಿದ್ದೇನೆ” ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ತಿಳಿಸಲಾಗಿದೆ.
ಪ್ರತ್ಯೇಕ ಟ್ವೀಟ್‌ನಲ್ಲಿ, ಮರಾಠೆ ತನ್ನ ಅಜ್ಜಿಯೊಂದಿಗೆ ಅಭ್ಯಾಸ ಮಾಡಿದ ನಂತರವೂ ಅವರೊಂದಿಗೆ ಆಟದಲ್ಲಿ ಸೋತಿದ್ದಾಗಿಯೂ ತಿಳಿಸಿದ್ದಾರೆ. ಇಳಿವಯಸ್ಸಲ್ಲೂ ಕ್ರೀಡಾ ಸ್ಫೂರ್ತಿ ತೋರುವ ಅಜ್ಜಿಯ ಸಂಭ್ರಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.