
ಮೊಮ್ಮಕ್ಕಳು ಎಂದರೆ ಅಜ್ಜ – ಅಜ್ಜಿಯರಿಗೆ ಎಷ್ಟು ಪ್ರೀತಿಯೊ…..ಹಾಗೆಯೇ ಮೊಮ್ಮಕ್ಕಳಿಗೂ ಅವರ ಅವಶ್ಯಕತೆ ಅಷ್ಟೇ ಮುಖ್ಯ. ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಅವರ ಸಾಮೀಪ್ಯ ತುಂಬಾ ಮುಖ್ಯ ಎಂಬುದು ಸಾಬೀತಾಗಿದೆ.
ಅಜ್ಜ – ಅಜ್ಜಿಯರಿಗೆ ಪ್ರೌಢಿಮೆ ಎಲ್ಲರಿಗಿಂತ ತುಸು ಹೆಚ್ಚೇ ಇರುತ್ತದೆ. ಇದು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಅವರ ಅತಿಯಾದ ಪ್ರೀತಿ ಮಕ್ಕಳ ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಸಹಾಯಕವಾಗುತ್ತದೆ. ಮಕ್ಕಳ ಮೇಲೆ ಅತಿಯಾದ ನಿಗಾ ವಹಿಸುವ ಇವರ ಮೇಲೆ ನಾವು ಸಹ ಅತಿಯಾದ ನಂಬಿಕೆಯನ್ನು ಇಡಬಹುದಾಗಿದೆ. ಜೊತೆಗೆ ಕುಟುಂಬದ ಇತಿಹಾಸ, ಬೌಂಡಿಂಗ್ ಎಲ್ಲವೂ ಮಕ್ಕಳಿಗೆ ತಿಳಿಯುತ್ತದೆ.
ಭಾವನಾತ್ಮಕ, ವರ್ತನೆಗಳ ಸಮಸ್ಯೆಯನ್ನು ಹೊಂದಿದ್ದರೆ ಅದನ್ನು ಆರಾಮವಾಗಿ ಬಗೆಹರಿಸಿಕೊಳ್ಳುವ ಶಕ್ತಿ ಇವರಿಗೆ ಬರುತ್ತದೆ.
ಇಲ್ಲಿ ಕಂಡುಬಂದಿರುವ ಅಂಶವೆಂದರೆ ಅಜ್ಜ – ಅಜ್ಜಿಯರ ಜೊತೆ ಬೆಳೆದವರು ಎಲ್ಲ ವಯಸ್ಸಿನವರಿಗೂ ಗೌರವ ಕೊಡುವುದನ್ನು ಕಲಿತಿರುತ್ತಾರೆ. ಇಂತಹ ಮಕ್ಕಳಿಗೆ ವಯಸ್ಸಾದವರನ್ನು ನೋಡಿ ಹೆದರುವ ಪ್ರಮೇಯವೇ ಇರುವುದಿಲ್ಲ.
ಇದು ಅಜ್ಜ – ಅಜ್ಜಿಯರ ದೃಷ್ಟಿಯಿಂದಲೂ ಅನುಕೂಲ ಅವರ ವಯಸ್ಸಿನಲ್ಲಿ ಐದು ವರ್ಷ ಕಿರಿಯರಂತೆ ಭಾಸವಾಗುವುದಲ್ಲದೆ, ಇದರಿಂದ ಒಂಟಿತನ ದೂರವಾಗಲಿದೆ. ಅಲ್ಲದೆ ಮಕ್ಕಳು ಸಹ ಡಿಪ್ರೆಷನ್ ಗೆ ಒಳಗಾಗುವುದಿಲ್ಲ.
ಅಜ್ಜ-ಅಜ್ಜಿಯವರು ತಮ್ಮ ಜೀವನದ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾರೆ. ಇದು ಮಕ್ಕಳಿಗೆ ಜೀವನದ ಬಗ್ಗೆ ಒಂದು ವಿಶಾಲವಾದ ದೃಷ್ಟಿಕೋನವನ್ನು ನೀಡುತ್ತದೆ. ಕಥೆಗಳು ಮತ್ತು ಹಾಡುಗಳನ್ನು ಹೇಳುವುದು ಮಕ್ಕಳ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅವರ ಭಾಷಾ ಕೌಶಲ್ಯಗಳನ್ನು ಸುಧಾರಿಸುತ್ತದೆ.
ಮಕ್ಕಳು ಅಜ್ಜ-ಅಜ್ಜಿಯವರ ಜೊತೆ ಬೆಳೆಯುವುದರಿಂದ ಅವರಿಗೆ ಸಂಬಂಧಗಳ ಮಹತ್ವ ತಿಳಿಯುತ್ತದೆ. ಕುಟುಂಬದ ಸದಸ್ಯರ ಜೊತೆ ಹೇಗೆ ಬಾಂಧವ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಯುತ್ತದೆ. ಅಜ್ಜ-ಅಜ್ಜಿಯವರ ಪ್ರೀತಿ ಮತ್ತು ಆರೈಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ಮಕ್ಕಳು ಸಂತೋಷದಿಂದ ಹಾಗೂ ಆರೋಗ್ಯದಿಂದ ಇರುತ್ತಾರೆ.
ಅಪ್ಪ – ಅಮ್ಮ ಇಬ್ಬರೂ ಕೆಲಸಕ್ಕೆಂದು ಹೊರ ಹೋಗುವವರಿದ್ದರೆ ಆ ಸ್ಥಾನವನ್ನು ಅಜ್ಜ – ಅಜ್ಜಿ ಬಿಟ್ಟರೆ ಬೇರಾರೂ ತುಂಬುವುದು ಕಷ್ಟ. ಇದರ ಜೊತೆ ನೈತಿಕ ಮೌಲ್ಯಗಳು ಬಲವರ್ಧನೆಗೆ ಇದು ಸಹಾಯಕವಾಗಲಿದೆ.