ಅಜ್ಜ-ಅಜ್ಜಿಯರಿಗೆ ತಮ್ಮ ಮೊಮ್ಮಕ್ಕಳ ಮೇಲೆ ಬಹಳ ಆಳವಾದ ಮಮತೆ ಇರುತ್ತದೆ. ಮೊಮ್ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಅಜ್ಜ-ಅಜ್ಜಿಯರು ಮೊಮ್ಮಕ್ಕಳೊಂದಿಗೆ ತಾವೂ ಮಕ್ಕಳಾಗಿಬಿಡುತ್ತಾರೆ.
ತನ್ನ ಮೊಮ್ಮಗಳೊಂದಿಗೆ ಸಮುದ್ರ ತೀರಕ್ಕೆ ಭೇಟಿ ಕೊಟ್ಟಿದ್ದ ಈ ಅಜ್ಜ, ಆಕೆಯ ಕುತೂಹಲ ತಣಿಸಲೆಂದು ಕಪ್ಪೆ ಚಿಪ್ಪುಗಳನ್ನು ಜೇಬಲ್ಲಿಟ್ಟುಕೊಂಡು ಬಂದು, ಮೊಮ್ಮಗಳಿಗೆ ಗೊತ್ತಾಗದಂತೆ ಚೆಲ್ಲುತ್ತಾ ಸಾಗಿದ್ದಾರೆ. ಕಪ್ಪೆ ಚಿಪ್ಪುಗಳನ್ನು ಕಂಡ ಮೊಮ್ಮಗಳು ಅವುಗಳನ್ನು ಭಾರೀ ಖುಷಿಯಿಂದ ಒಂದೊಂದಾಗಿ ಎತ್ತಿಕೊಳ್ಳುತ್ತಾ ಸಾಗಿದ್ದಾಳೆ.
“ಯಾರೇ ಆದರೂ ನನಗೆ ಕಲಿಸಬಹುದಾದ ಅತ್ಯುತ್ತಮ ಪಾಠ. ಪಾಪ್ ಒಬ್ಬ ಲೆಜೆಂಡ್,” ಎಂದು ದಿ ಡೊರೆ ಫಾಮ್ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
https://youtu.be/aFOn7LxLymI