ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯ ಸಿಹೋಲಿಯಾ ಗ್ರಾಮದಲ್ಲಿ ಶನಿವಾರ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಪತ್ನಿ ಹತ್ಯೆ, ಪತಿಯ ಆತ್ಮಹತ್ಯೆ ಮತ್ತು ಮೊಮ್ಮಗನ ಚಿತೆಗೆ ಅಜ್ಜ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಕ್ರವಾರ ಅಭಯರಾಜ್ ಯಾದವ್ (34) ಎಂಬಾತ ತನ್ನ ಪತ್ನಿ ಸವಿತಾ ಯಾದವ್ (30)ಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದನು. ಇಬ್ಬರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನೆರವೇರಿತ್ತು.
ಮೊಮ್ಮಗನ ಸಾವಿನಿಂದ ಆಘಾತಕ್ಕೊಳಗಾದ ಅಜ್ಜ ರಾಮವತಾರ್ ಯಾದವ್ ಶನಿವಾರ ಬೆಳಿಗ್ಗೆ ಮೊಮ್ಮಗನ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸವಿತಾಳನ್ನು ಅಭಯರಾಜ್ ಏಕೆ ಕೊಂದನೆಂಬುದು ತಿಳಿದುಬಂದಿಲ್ಲ. ಕೊಲೆ ಮತ್ತು ಆತ್ಮಹತ್ಯೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.