ಗದಗ: ಅಜ್ಜಿಯಿಂದಲೇ 9 ತಿಂಗಳ ಮಗು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಗದಗ ಜಿಲ್ಲೆ ಗಜೇಂದ್ರಗಢ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.
ಅತ್ತೆ ಸರೋಜಾ ವಿರುದ್ಧ ಸೊಸೆ ನಾಗರತ್ನ ದೂರು ನೀಡಿದ್ದಾರೆ. ನವೆಂಬರ್ 22 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 22ರಂದು ತಮ್ಮದೇ ಜಮೀನಿನಲ್ಲಿ ಮಗುವಿನ ಅಂತ್ಯ ಸಂಸ್ಕಾರ ಮಾಡಲಾಗಿದೆ. ಪೊಲೀಸರು ಮರಣೋತ್ತರ ಪರೀಕ್ಷೆಗೆ ಮಗುವಿನ ಮೃತದೇಹ ಕಳಿಸಿದ್ದಾರೆ. ಹೆರಿಗೆಯಾದ 5 ತಿಂಗಳ ಬಳಿಕ ಪತ್ನಿ, ಮಗು ಗಂಡನ ಮನೆಗೆ ಬಂದಿದ್ದರು.
ಇಷ್ಟು ಬೇಗ ಮಗು ಬೇಕಿತ್ತಾ ಎಂದು ಅತ್ತೆ ಸರೋಜಾ ಪ್ರಶ್ನೆ ಮಾಡಿದ್ದರು. ಮಗುವಿಗೆ ಅಡಕೆ ಹೋಳು, ಎಲೆ ತಿನ್ನಿಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.