ಮುಂಬೈ: ಜನವರಿ 28 ರಿಂದ 29 ರ ನಡುವೆ ಮುಂಬೈನಲ್ಲಿ ನಡೆದ ಲೊಲ್ಲಾಪಲೂಜಾ ಸಂಗೀತ ಉತ್ಸವವು ಪ್ರಪಂಚದಾದ್ಯಂತದ ಅನೇಕ ಗೌರವಾನ್ವಿತ ಕಲಾವಿದರನ್ನು ಭಾರತದ ಆರ್ಥಿಕ ರಾಜಧಾನಿಗೆ ಆಹ್ವಾನಿಸಿತು. ಬಹು ಗ್ರ್ಯಾಮಿ ಪ್ರಶಸ್ತಿ-ವಿಜೇತ ಕಲಾವಿದ ಡಿಜೆ ಥಾಮಸ್ ವೆಸ್ಲಿ ಪೆಂಟ್ಜ್ ಅವರೂ ಸಂಗೀತ ಕಾರ್ಯದಲ್ಲಿ ಭಾಗಿಯಾಗಿದ್ದರು.
ಭಾರತ ಭೇಟಿಯ ಸಮಯದಲ್ಲಿ, 44 ವರ್ಷದ ಸಂಗೀತಗಾರ ಥಾಮಸ್ ಅವರು ಕೆಲವು ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಂಡರು. ಅದನ್ನು ಅವರು ಇನ್ಸ್ಟಾಗ್ರಾಮ್ನಲ್ಲಿಲ ಹಂಚಿಕೊಂಡಿದ್ದಾರೆ ಮತ್ತು “ಭಾರತಕ್ಕೆ ಬಂದಿಳಿದ ತಕ್ಷಣ ಕ್ರಿಕೆಟ್ ಆಡಲು ಹೋದೆ” ಎಂದು ಬರೆದುಕೊಂಡಿದ್ದಾರೆ.
ಜನವರಿ 31 ರಂದು ಪೋಸ್ಟ್ ಮಾಡಿದ ನಂತರ ಅವರ ವೀಡಿಯೊ 83,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಅದರ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಮೂಲದ ಜನಪ್ರಿಯ ಅಮೇರಿಕನ್ ರಾಪರ್ ರಾಜ ಕುಮಾರಿ, “ಈ ಹಂತದಲ್ಲಿ ಓಸಿಐ ಕಾರ್ಡ್ ಅಗತ್ಯವಿದೆ” ಎಂದು ತಮಾಷೆಯಾಗಿ ಬರೆದಿದ್ದಾರೆ. ಭಾರತೀಯ ಗಾಯಕ ಅರ್ಜುನ್ ಕನುಂಗೋ ಕೂಡ ತಮಾಷೆಯಾಗಿ “ಐಪಿಎಲ್‌ಗೆ ಪ್ರದರ್ಶನ ನೀಡಲು ಹಿಂತಿರುಗಿ ಎಂದಿದ್ದಾರೆ.