ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ 5964 ಗ್ರಾಮ ಪಂಚಾಯಿತಿಗಳಲ್ಲಿ ಯುವಜನ ಪ್ರಗತಿ ಪರಿಶೀಲನೆ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಚಿಂತನೆ ನಡೆಸಿದೆ.
ಜನವರಿ 12 ರಂದು ಯುವ ದಿನೋತ್ಸವ ಅಂಗವಾಗಿ ನಾನಾ ಯುವ ಯೋಜನೆಗಳೊಂದಿಗೆ ಆದೇಶ ಹೊರಡಿಸಲು ಚಿಂತನೆ ನಡೆದಿದೆ. ಕಳೆದ ವರ್ಷ ಸಪ್ತಾಹದ ಮೂಲಕ ಯುವಕರ ಯೋಜನೆಗಳ ಪ್ರಚಾರಕ್ಕೆ ಆದ್ಯತೆ ನೀಡಲಾಗಿತ್ತು. ಈ ಬಾರಿ ಯುವಜನ ಪ್ರಗತಿ ಪರಿಶೀಲನೆಗೆ ದಿನವೊಂದನ್ನು ಮೀಸಲಿಡಲಾಗುವುದು.
ಯುವಕರಲ್ಲಿ ಶೇಕಡ 64ರಷ್ಟು ಜನ ಗ್ರಾಮಗಳಲ್ಲಿದ್ದು, ಅಭಿವೃದ್ಧಿಯಲ್ಲಿ ತೊಡಗಲು ವೇದಿಕೆ ಕಲ್ಪಿಸಿಕೊಡಲಾಗುವುದು. 4605 ವಿವೇಕ ಸಂಘಗಳ ಪ್ರತಿನಿಧಿಗಳನ್ನು ಗ್ರಾಮ ಪಂಚಾಯಿತಿ ಯುವಜನ ಸಭೆಗೆ ಆಹ್ವಾನಿಸಲಾಗುವುದು. ಯುವ ಸಂಘಗಳಿಗೆ 10,000 ಸುತ್ತು ನಿಧಿ ವಿತರಿಸಲಾಗುವುದು. ವಿವಿಧ ಇಲಾಖೆಗಳಿಂದ ಯುವಕರಿಗೆ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ, ಕ್ರೀಡಾಕೂಟಗಳ ಪ್ರಗತಿ ಪರಿಶೀಲನೆ, 540 ಯೋಜನೆಗಳ ಯುವಜನ ಕಣಜದ ಮಾಹಿತಿ, ಸಹಾಯವಾಣಿ ಸಂಖ್ಯೆ 155265 ಸಂಖ್ಯೆ ಪ್ರಚಾರ, ನಶೆ ಮುಕ್ತ ಭಾರತ ಜಾಗೃತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.