
ಬೆಂಗಳೂರು: 5 ವರ್ಷದ ಮಗಳನ್ನು ಕೊಂದು ಗುಂಡಾರನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದ ಮನೆ ಮಾಲಕಿಯ ಸಾವಿನಿಂದ ಪ್ರೇರಣೆಗೊಂಡು ಅದೇ ಮಾದರಲ್ಲಿಯಲ್ಲಿ ಡೆತ್ ನೋಟ್ ಬರೆದಿಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಪಾವಗಡದ ಗುಂಡಾರನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೃತಿ (33), ಬಾಗಲಗುಂಟೆಯಲ್ಲಿ ತನ್ನ 5 ವರ್ಷದ ಮಗಳು ರೋಷಿಣಿಯನ್ನು ನೇಣುಬಿಗಿದು ಕೊಲೆಗೈದು ಬಳಿಕ ಅದೇ ಫ್ಯಾನಿಗೆ ತಾನೂ ನೇಣಿಗೆ ಕೊರಳೊಡ್ಡಿದ್ದರು. ಸಾವಿಗೂ ಮುನ್ನ ಬರೆದಿಟ್ತಿರುವ ಡೆತ್ ನೋಟ್ ಪತ್ತೆಯಾಗಿದೆ. ಗ್ರಾಮ ಪಂಚಾಯತ್ ನಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ಎಂಬಾತನನ್ನು ಪ್ರೀಟಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಆದಾಗ್ಯೂ ಪತಿ ಗೋಪಾಲಕೃಷ್ಣ ಪರಸ್ತ್ರೀ ಸಹವಾಸ ಮಾಡಿದ್ದ ಎನ್ನಲಾಗಿದೆ.
ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶೃತಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಈ ಆತ್ಮಹತ್ಯೆ ಪ್ರಕರಣಕ್ಕೂ ಮನೆ ಮಾಲಕಿಯೊಬ್ಬರು ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೂ ಹೋಲಿಕೆಯಿರುವುದು ಕಂಡುಬಂದಿದ್ದು, ಇದರಿಂದ ಪ್ರೇರಣೆಗೊಂಡು ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬಾಡಿಗೆ ಮನೆಯ ಮಾಲಕರೊಬ್ಬರ ಪತ್ನಿ, ಪತಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ನೊಂದು ಡೆತ್ ನೋಟ್ ಬರೆದು ಪತಿ ಹಾಗೂ ಮಹಿಳೆಯ ಹೆಸರು ಬರೆದಿಟ್ಟು ಸಾವಿಗೆ ಶರಣಾಗಿದ್ದರು. ಇದೇ ರೀತಿ ಘಟನೆ ಶೃತಿ ಬಾಳಿಯನಲ್ಲಿಯೂ ಸಂಭವಿಸಿತ್ತು. ಇದರಿಂದ ಪತಿಯ ಹುಚ್ಚಾಟಕ್ಕೆ ತೀವ್ರವಾಗಿ ನೊಂದಿದ್ದ ಶೃತಿ ಡೆತ್ ನೋಟ್ ಬರೆದಿಟ್ಟು, ತನ್ನ ಮಗಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.