ಬೆಂಗಳೂರು: ಇಂದು ಮತ್ತು ಡಿಸೆಂಬರ್ 27 ರಂದು ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದ್ದು, ಮತದಾರರು ವೋಟರ್ ಕಾರ್ಡ್ ಇಲ್ಲದಿದ್ದಾಗ ಚುನಾವಣಾ ಆಯೋಗದ ನಿರ್ದೇಶನದಂತೆ ಕೆಳಕಂಡ ದಾಖಲೆ ತೋರಿಸಿ ಮತ ಚಲಾಯಿಸಬಹುದಾಗಿದೆ.
ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಾನ್ಕಾರ್ಡ್, ಸಂಸ್ಥೆಗಳು ನೌಕರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಬ್ಯಾಂಕ್/ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ಪುಸ್ತಕ, ವಿದ್ಯಾರ್ಥಿಗಳಿಗೆ ನೀಡಿರುವ ಗುರುತಿನ ಚೀಟಿ, ಭಾವಚಿತ್ರವಿರುವ ನೋಂದಾಯಿತಿ ಡೀಡ್/ಪಟ್ಟಾ ಮುಂತಾದ ಆಸ್ತಿ ದಾಖಲೆ ತೋರಿಸಬಹುದಾಗಿದೆ.
ಭಾವಚಿತ್ರವಿರುವ ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ, ಪಿಂಚಣಿ/ ವೃದ್ಯಾಪ್ಯ ವೇತನ/ ವಿಧವಾ ವೇತನ ಆದೇಶ ಪತ್ರ, ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು, ಭಾವಚಿತ್ರವಿರುವ ಶಸ್ತ್ರ ಪರವಾನಗಿ, ಅಂಗವಿಕಲರ ಗುರುತಿನ ಚೀಟಿ, ಮಾಜೀಯೋಧರ ಸಿ.ಎಸ್.ಡಿ.ಕ್ಯಾಂಟಿನ್ ಕಾರ್ಡ್, ಸಂಧ್ಯಾಸುರಕ್ಷ ಗುರುತಿನ ಚೀಟಿ, ನರೇಗಾ ಯೋಜನೆಯ ಉದ್ಯೋಗ ಕಾರ್ಡ್, ಯಶಸ್ವಿನಿ ಕಾರ್ಡ್, ಮಹಾನಗರಪಾಲಿಕೆ/ನಗರಸಭೆ/ಗ್ರಾ.ಪಂ. ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ, ಹಿರಿಯ ನಾಗರೀಕರ ಗುರುತಿನ ಚೀಟಿ, ಆರೋಗ್ಯ ವಿಮಾ ಯೋಜನೆಯ ಸ್ಮಾರ್ಟ್ಕಾರ್ಡ್ ಅಥವಾ ಆಧಾರ್ ಕಾರ್ಡ್ ಇವುಗಳನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಹೇಳಲಾಗಿದೆ. ಶಾಯಿಯನ್ನು ಮತದಾರರ ಎಡಗೈ ಹೆಬ್ಬೆರಳಿಗೆ’ ಲೇಪಿಸಲಾಗುವುದು.