ಬೆಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ‘ಗ್ರಾಮ ಒನ್’ ಸೇವೆಗಳನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಬೆಂಗಳೂರು ಒನ್, ಕರ್ನಾಟಕ ಒನ್ ಮಾದರಿಯಲ್ಲಿ ಸರ್ಕಾರಿ ಸೇವೆಗಳನ್ನು ಗ್ರಾಮೀಣ ಜನತೆಗೆ ತಲುಪಿಸುವ ಉದ್ದೇಶದಿಂದ ‘ಗ್ರಾಮ ಒನ್’ ಯೋಜನೆಯನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಜಾರಿಗೊಳಿಸಲಾಗುತ್ತದೆ.
ಮೊದಲ ಹಂತದಲ್ಲಿ 12 ಜಿಲ್ಲೆಗಳ 3026 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ. 2937 ಗ್ರಾಮ ಪಂಚಾಯಿತಿಗಳಲ್ಲಿಯೂ ಯೋಜನೆ ಜಾರಿಯಾಗಲಿದ್ದು, ಸೇವಾ ಸಿಂಧುವಿನ ಎಲ್ಲಾ 750ಕ್ಕೂ ಹೆಚ್ಚು ಸೇವೆಗಳು ಗ್ರಾಮ ಒನ್ ಸೇವೆಯಲ್ಲಿ ಸಿಗಲಿವೆ. ಸಂಧ್ಯಾ ಸುರಕ್ಷಾ, ಆರ್ಟಿಸಿ, ಆಯುಷ್ಮಾನ್ ಭಾರತ್, ಕೆಲವು ಬ್ಯಾಂಕಿಂಗ್ ಸೇವೆಗಳು, ಆದಾಯ, ಜಾತಿ ಪ್ರಮಾಣಪತ್ರಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.