![](https://kannadadunia.com/wp-content/uploads/2020/12/vidhana-soudha-750-1-jpg_710x400xt-1.jpg)
ಬೆಂಗಳೂರು : 11,494 ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ ಕುರಿತಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಆಫೀಲು ಸಂಖ್ಯೆ 305/202.(GM-CC) ದಿನಾಂಕ 12.10,2023 ರಂದು ನೀಡಿರುವ ತೀರ್ಪಿನ ವಿರುದ್ಧ ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ವಿಶೇಷ ಅನುಮತಿ Fos (2) 27984-27988/2023 do 22.01.2024 ರ ಮಧ್ಯಂತರ ಆದೇಶವನ್ನು ಪಾಲಿಸುವ ಕುರಿತು ಶಿಕ್ಷಣ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿದೆ.
ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಆಫೀಲು ಸಂಖ್ಯೆ 305/2023(GM-CC) ದಿನಾಂಕ 12.10.2023 ರಂದು ನೀಡಿರುವ ತೀರ್ಪಿನ ವಿರುದ್ಧ ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ವಿಶೇಷ ಅನುಮತಿ (k) 27984-27988/2023 ៩៨៨ ms 22.01.2024 ರ ಮಧ್ಯಂತರ ಆದೇಶವನ್ನು ಪಾಲಿಸುವ ಕುರಿತು ಸೂಚನೆ ನೀಡಿದೆ.
ಈಗಾಗಲೇ ನೇಮಕಾತಿ ಆದೇಶ ಪಡೆದು ನೇಮಕಗೊಂಡಿರುವ 11,494 ಅಭ್ಯರ್ಥಿಗಳಿಗೆ ತಮ್ಮ ನೇಮಕಾತಿಯು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿನ ಮೇಲಿನ ಪ್ರಕರಣಗಳ ಅಂತಿಮ ತೀರ್ಪಿನ ಷರತ್ತಿಗೊಳಪಟ್ಟಿರುತ್ತದೆ ಎಂಬುದನ್ನು ಗಮನಕ್ಕೆ ತರಲು ನೇಮಕಾತಿ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪನಿರ್ದೆಶಕರು(ಆಡಳಿತ) ಲಿಖಿತವಾಗಿ ಪ್ರತಿ ಶಿಕ್ಷಕರುಗಳಿಗೆ ಜಾರಿ ಮಾಡಿ ಸ್ವೀಕೃತಿಯನ್ನು ಪಡೆದು, ನೇಮಕಾತಿ ಆದೇಶ ನೀಡಲಾದ ಕಡತದಲ್ಲಿ ಕಾಯ್ದಿರಿಸಲು ಎಲ್ಲಾ ತುರ್ತು ಅಗತ್ಯ ಕ್ರಮಗಳನ್ನು ಕೈಗೊಂಡು ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿಗಳು, ಕೆ.ಜಿ.ರಸ್ತೆ, ಬೆಂಗಳೂರು ಇವರಿಗೆ ಕ್ರೂಢೀಕೃತ ಜಿಲ್ಲಾವಾರು ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಿ ಈ ಕಛೇರಿಗೆ ವರದಿ ಮಾಡಲು ತಿಳಿಸಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಹಂತದಲ್ಲಿನ ವಿಳಂಬಕ್ಕೆ ಅವಕಾಶ ನೀಡದೆ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಲು ಸೂಚಿಸಿದೆ.
![](https://kannadadunia.com/wp-content/uploads/2024/02/WhatsApp-Image-2024-02-13-at-10.20.33-AM-1.jpeg)