ನವದೆಹಲಿ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕೋವಿಶೀಲ್ಡ್ ಲಸಿಕೆಯನ್ನು ಖರೀದಿಸಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ.
ಶೀಘ್ರವೇ ಲಸಿಕೆ ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಒಪ್ಪಂದ ಮಾಡಿಕೊಳ್ಳಲಿವೆ. 1300 ಕೋಟಿ ರೂಪಾಯಿ ಮೊತ್ತದ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. 6.6 ಕೋಟಿ ಡೋಸ್ ಲಸಿಕೆ ಖರೀದಿ ಮಾಡಲಾಗುತ್ತದೆ. ಒಂದು ಡೋಸ್ ಗೆ 200 ರೂಪಾಯಿ ದರದಲ್ಲಿ ಲಸಿಕೆ ಖರೀದಿ ಮಾಡಲಾಗುತ್ತದೆ. ಶೇಕಡ 10 ರಷ್ಟು ಲಸಿಕೆ ಸಾಗಾಟ ಮತ್ತು ಫ್ರಿಡ್ಜ್ ಸಮಸ್ಯೆಯಿಂದ ಹಾಳಾಗಬಹುದು ಎಂದು ಅಂದಾಜಿಸಲಾಗಿದೆ. 3 ಕೋಟಿ ಜನರಿಗೆ 6.6 ಡೋಸ್ ಲಸಿಕೆ ಖರೀದಿಗೆ ಪ್ಲಾನ್ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.