ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳಲ್ಲಿ 800 ಮಿಲಿಯನ್ ಜನರಿಗೆ ಆಹಾರಧಾನ್ಯವನ್ನು ಉಚಿತವಾಗಿ ನೀಡಲು ಸರ್ಕಾರ ಮುಂದಾಗಿದೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ದೇಶದ ಜನ ತತ್ತರಿಸಿದ್ದು, ಬಡವರಿಗೆ ಪೌಷ್ಟಿಕಾಂಶ ಒದಗಿಸಲು ತಲಾ ಐದು ಕೆಜಿ ಆಹಾರ ಧಾನ್ಯ ನೀಡಲಾಗುವುದು.
ಆಹಾರ ಭದ್ರತಾ ಕಾಯ್ದೆ ವ್ಯಾಪ್ತಿಯ ಲಕ್ಷಾಂತರ ಬಡವರಿಗಾಗಿ ಉಚಿತವಾಗಿ ಆಹಾರಧಾನ್ಯ ನೀಡಲಾಗುತ್ತದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಮೇ ಮತ್ತು ಜೂನ್ ನಲ್ಲಿ ಆಹಾರಧಾನ್ಯ ವಿತರಿಸಲಾಗುತ್ತದೆ. ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ವಲಯದವರೆಗೆ ಅಕ್ಕಿ, ಗೋಧಿ ನೀಡಲಾಗುತ್ತದೆ. ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯ ನೀಡಲಾಗುವುದು. ಇದಕ್ಕಾಗಿ 26 ಸಾವಿರ ಕೋಟಿ ರೂಪಾಯಿ ಭರಿಸಲಾಗುತ್ತದೆ ಎಂದು ಹೇಳಲಾಗಿದೆ.